ಕೊನೆಗೂ ಬಂತು ಅವ್ಯವಹಾರ ತನಿಖೆಗೆ ಆದೇಶ
ಗುರುಮಠಕಲ್: ಯಾದಗಿರಿ ಜಿಲ್ಲೆಯಲ್ಲಿ ಖಾತ್ರಿ ಯೋಜನೆಯಲ್ಲಿ ಭಾರಿ ಪ್ರಮಾಣ ಅವ್ಯವಹಾರಗಳು ನಡೆದಿವೆ ಎಂದು ಎಲ್ಲಾರೂ ಆರೋಪಿಸಿ ಸಂಬಂಧಪಟ್ಟವರಿಗೆ ದೂರು ನೀಡಿದೆ. ಅದರೆ ಎಲ್ಲಿಯೂ ತನಿಖೆ ನಡೆದ ಬಗ್ಗೆ ಕುರುಹುಗಳ ಕಾಣುತ್ತಿಲ್ಲ. ಅಂತದರಲ್ಲಿ ಇದಿಗಾ ಚಂಡರಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದು ಕಳಪೆ ಮಟ್ಟದ ಕಾಮಗಾರಿ ನಡೆಸಿ ಬೋಗಸ್ ಬಿಲ್ಗಳನ್ನು ಮಾಡಿರುವ ಘಟನೆ ಬೆಳಕಿಗೆ ಬಂದು ತನಿಖೆ ನಡೆಸಲು ಇದಿಗಾ ಸರ್ಕಾರದಿಂದ ಅದೇಶ ಬಂದು ತನಿಖಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದೆ.
ಇಲ್ಲಿನ ಚಂಡರಕಿ ಗ್ರಾಪಂ ವ್ಯಾಪ್ತಿಯಲ್ಲಿನ ಉದ್ಯೋಗ ಖಾತರಿ ಯೋಜನೆಯಲ್ಲಿ 2009 ರಲ್ಲಿ ನಡೆಸಿದ ಕಾಮಗಾರಿಗಳು ಎಲ್ಲಾವೂ ಬೋಗಸ್ ಆಗಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೂ ಜಾಬ್ಕಾರ್ಡ್ ನೀಡಿರುವುದು, ಮರಣ ಹೊಂದಿದವ ಹೆಸರಿನಲ್ಲಿ ಖೋಟಾ ದಾಖಲೆಗಳ ಸೃಷ್ಟಿ, ನಿವೃತ್ತ ಮತ್ತು ಹಾಲಿ ಸರ್ಕಾರಿ ಸೇವೆಸಲ್ಲಿಸುತ್ತಿರುವ ಹೆಸರಿನಲ್ಲಿ ಜಾಬ್ಕಾರ್ಡ್ ಮಾಡಿಸಿ ಖಾತ್ರಿ ಹಣ ಲಪಟಾಯಿಸಿರುವುದನ್ನು ಗ್ರಾಮಸ್ಥರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತಾಲಯದಿಂದ ಜ.2, 2014 ರಂದು ಕಾಮಗಾರಿಗಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಆದೇಶಿಸಲಾದ ಹಿನ್ನೆಲೆ ಖಾತ್ರಿ ಯೋಜನೆಯ ರಾಜ್ಯ ಗುಣ ನಿಯಂತ್ರಣ ಮಾನಿಟರ್ ಎಂ.ಎನ್. ಶೇಖರಪ್ಪ 16ರಂದು ಕಡತ ಪರಿಶೀಲನೆ ನಡೆಸಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡತಗಳೆ ಇಲ್ಲ: ಇಲ್ಲಿ ನಡೆದ ಕಾಮಗಾರಿಗಳಿಗೆ ಸಂಬಂಧ ಪಟ್ಟಂತಹ ಕಡತಗಳು ಇರಬೇಕಾದ ಕಾರ್ಯಲಯದಲ್ಲಿ ಇಲ್ಲದೆ, ಕಾಮಗಾರಿ ಪರಿಶೀಲನೆಗೆ ತೆರಳಲು ವಿವಿಧ ಕಾಮಗಾರಿಗಳ ಕಡತ ಪರಿಶೀಲನೆಗೆ ಬಂದ ಅಧಿಕಾರಿಗಳು ದೂರು ನೀಡಿರುವ ಕಾಮಗಾರಿಯ ಸಂಬಂಧಿಸಿದ ಕಡತಗಳನ್ನು ಪಿಡಿಒಗೆ ಕೇಳುತ್ತಿದ್ದರೇ ಯಾಮೊಂದು ಕಡತಗಳು ಅಧಿಕಾರಿಗಳ ಕೈಗೆ ಸಿಗಲಿಲ್ಲ. ಯಾವುದೇ ಕಾಮಗಾರಿಯ ಕುರಿತು ಕಡತಗಳನ್ನು ಕೇಳಿದರೆ ಪಿಡಿಒ ಮನ್ಸೂರ ಅಲೀ ಮೌನ ವಹಿಸಿದ್ದರು.
ಖಾತ್ರಿ ಯೋಜನೆಯಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಾಸಿದ ಚೆಕ್ ಡ್ಯಾಂ, ರಾಶಿ ಕಣಗಳ ಕಾಮಗಾರಿಗಳು ಸಮರ್ಪಕವಾಗಿ ಮಾಡದೆಯೇ ಭ್ರಷ್ಟಾಚಾರ ನಡೆಸಿದ್ದಾರೆ.
ಜಿಲ್ಲಾಡಳಿತಕ್ಕೂ ದೂರು: ಹನಿ, ತುಂತುರು ನೀರಾವರಿಗಾಗಿ ಬಿಡುಗಡೆಯಾಗಿದ್ದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆಂಬ ಹತ್ತು ಹಲವು ಆರೋಪಗಳನ್ನು ಮಾಡಿದ್ದ ಗ್ರಾಮಸ್ಥರು ಇದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಗ್ರಾಮಿಣಾಭೀವೃದ್ಧಿ ಪಂಚಾಯತ್ರಾಜ್ ಸಚಿವರು ಸೇರಿ ಜಿಲ್ಲಾಡಳಿತಕ್ಕೂ ದೂರು ನೀಡಿದ್ದರು.
ಯೋಜನೆಯಲ್ಲಿ ನಿರ್ವಹಣೆಗೊಂಡಿರುವ ಚಂಡರಕಿ ಗ್ರಾಮದ ರಸ್ತೆ ಪಕ್ಕದಲ್ಲಿ ಗಿಡ ನೆಡುವ ಕಾಮಗಾರಿಯನ್ನು ಪರಿಶೀಲಿಸಿ ಬಳಿಕ ಪಂಚಾಯತ್ ವ್ಯಾಪ್ತಿಯ ಮಡೇಪಲ್ಲಿ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ 1 ಲಕ್ಷ ವೆಚ್ಚದ ಮತ್ತು 1.87ಲಕ್ಷ ವೆಚ್ಚದ ಪ್ರತ್ಯೇಕ ಚೆಕ್ ಡ್ಯಾಮ್ಗಳ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಿದರು.
ಅಧಿಕಾರಿಗಳು ನಾಪತ್ತೆ: ಅಧಿಕಾರಿಗಳು ಪರಿಶೀಲನೆಗೆ ತೆರಳಿದಾಗ ಇದಕ್ಕೆ ಸಂಬಂಧಿಸಿದ ಜಿಪಂ ಅಧಿಕಾರಿಗಳಾಗಲಿ ಅವರ ಸಹಾಯಕರಾಗಲಿ, ತಾಪಂನ ಯಾಮೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಸ್ಥಳೀಯರಲ್ಲಿ ಹಲವು ಅನುಮಾನಗಳು ಹುಟ್ಟಲು ಕಾರಣವಾಗಿದೆ.
ದೂರು ಹಿಂದಕ್ಕೆ ಪಡೆಯಲು ಒತ್ತಾಯ: ಗ್ರಾಪಂನ ಅವ್ಯವಹಾರದ ಬಗ್ಗೆ ದೂರು ನೀಡಿದ ಭೀಮಣ್ಣ ಅಗಸರ್ಗೆ ಈ ಪ್ರಕರಣದ ದೂರನ್ನು ಹಿಂದಕ್ಕೆ ಪಡೆಯಲು ಅಧಿಕಾರಿ ವರ್ಗ ಹಲವರಿಂದ ಒತ್ತಡ ಹಾಕಿಸುತ್ತಲ್ಲಿದ್ದಾರೆ. ಆದರೆ ದೂರನ್ನು ಹಿಂದಕ್ಕೆ ಪಡೆಯುವ ಮಾತೆಯಿಲ್ಲ. ಅವ್ಯವಹಾರದಲ್ಲಿ ಶಾಮೀಲಾಗಿರುವರಿಗೆ ಶಿಕ್ಷೆಗೆ ಒಳಪಡಿಸುವ ವರೆಗೆ ಹೋರಾಟವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.
ನೈಜ ವರದಿ ಸಲ್ಲಿಸುತ್ತೇವೆ: ನಡೆದ ಕಾಮಗಾರಿಗಳಲ್ಲಿ ಲೋಪಗಳಿದ್ದು, ಈ ಕುರಿತು ಪರಿಶೀಲನೆ ಮಾಡಿದ್ದೇನೆ. ಜ.21ರಂದು ಇಲಾಖೆ ಮಟ್ಟದಲ್ಲಿ ಸಭೆ ನಡೆಯಲಿದೆ. ಅಲ್ಲಿ ಇಲ್ಲಿನ ಎಲ್ಲಾ ನೈಜ ಸ್ಥಿತಿಗತಿಯ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ರಾಜ್ಯ ಗುಣ ನಿಯಂತ್ರಣ ಮಾನಿಟರ್ ಎಂ.ಎನ್. ಶೇಖರಪ್ಪ ತಿಳಿಸಿದ್ದಾರೆ.