ಗುಲ್ಬರ್ಗದಲ್ಲಿ ಇಂದಿನಿಂದ ಉಚಿತ ಯೋಗ ಶಿಬಿರ
ಗುಲ್ಬರ್ಗ: ಅಧ್ಯಾತ್ಮಿಕ ಪ್ರವಚನ ಸಮಿತಿ ಹಾಗೂ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಜ. 20 ರಿಂದ 27ರವರೆಗೆ ಒಂದು ವಾರ ಕಾಲ ಶ್ವಾಸಗುರು ವಚನಾನಂದ ಸ್ವಾಮಿಯವರಿಂದ ಯೋಗಯುಕ್ತ ರೋಗ ಮುಕ್ತ ಎಂಬ ಉಚಿತ ಯೋಗ ಶಿಬಿರ ನಗರದ ರೋಟರಿ ಕ್ಲಬ್ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಗರೂರ ತಿಳಿಸಿದ್ದಾರೆ. ಈ ಉಚಿತ ಶಿಬಿರ ಮುಂಜಾನೆ 5.30 ಗಂಟೆಯಿಂದ 7 ಗಂಟೆಯವರೆಗೆ ಯೋಗ, ಪ್ರಾಣಯಾಮ, ಆಸನ ನಡೆಸಲಾಗುವುದು. ಸಾಯಂಕಾಲ 6 ಗಂಟೆಯಿಂದ 7.30 ವರೆಗೆ ಧ್ಯಾನ, ಭಜನೆ, ಸತ್ಸಂಗ, ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಆರೋಗ್ಯ ಸಂಬಂಧಿತ ಆರ್ಯುವೇದದ ಔಷಧದ ಸಲಹೆ ಸೂಚನೆ ನೀಡುವರು. ಈ ಯೋಗ ಶಿಬಿರದಲ್ಲಿ ಮಧ್ಯೆ ದಿನವೂ ನಗರದ ಆಯ್ದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ವ್ಯಕ್ತಿತ್ವ ವಿಕಸನ ಸಂಬಂಧ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೇರ ಸಂವಾದ ಕಾರ್ಯಕ್ರಮ ನೀಡಲಾಗಿದೆ.