ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಲು ಆಗ್ರಹ
ಹುಣಸಗಿ: ಪಟ್ಟಣದ ದಸಂಸ ವತಿಯಿಂದ ಹುಣಸಗಿ ವಿಶೇಷ ತಹಸೀಲ್ದಾರ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು. ಹುಣಸಗಿ ದಸಂಸ ಸಂಚಾಲಕ ಪ್ರಭು ಕಚಕನೂರ ಮಾತನಾಡಿ, ಶಹಾಪುರ ತಾಲೂಕಿನ ಕನ್ಯಾ ಕೋಳುರ ಗ್ರಾಮದಲ್ಲಿ ದಲಿತ ಕೊಲೆಯಾದ ವ್ಯಕ್ತಿಗೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸವರ್ಣೀಯರು ಮೊದಲಿನಿಂದಲೂ ದಲಿತರ ಮೇಲೆ ವೈಮನಸ್ಯ ಇಟ್ಟುಕೊಂಡಿದ್ದಾರೆ. ಜಾತ್ರೆಯ ನೆಪದಲ್ಲಿ ದಲಿತರ ಮೇಲೆ ಹಲ್ಲೆ ಮಾಡಲಾಗಿದೆಂದು ಆರೋಪಿಸಿದರು. ಹತ್ಯೆಯಾದ ದೇವಿಂದ್ರಪ್ಪ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ಗ್ರಾಮದಲ್ಲಿ ವಾಸಿಸುವ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಹೇಳಿದರು. ದೇವಿಂದ್ರಪ್ಪನನ್ನು ಹತ್ಯೆ ಮಾಡಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಆರೋಪಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿ ಮನವಿ ಪತ್ರ ನೀಡಲಾಯಿತು. ಡಿಎಸ್‌ಎಸ್ ಯಾದಗಿರಿ ಜಿಲ್ಲಾ ಸಂಚಾಲಕ ಯಮನಪ್ಪ ಚನ್ನೂರ, ಬಸವರಾಜ ಹಾದಿಮನಿ, ಬಸವರಾಜ ದ್ಯಾಮನಾಳ, ಹೊನ್ನಪ್ಪ ಹಗರಟಗಿ, ಯಮನೂರಿ ಇಲಕಲ್ಲ, ಮಲ್ಲಣ್ಣ ಕಟ್ಟಿಮನಿ ಇತರರು ಇದ್ದರು.