ಪಲ್ಸ್ ಪೋಲಿಯೋ: ನೋಡಲ್ ಅಧಿಕಾರಿಗಳ ನೇಮಕ
ಗುಲ್ಬರ್ಗ: ಮೊದಲ ಸುತ್ತಿನ ಪಲ್ಸ್ ಪೋಲಿಯೋ (ಎನ್.ಐ.ಡಿ.)ಕಾರ್ಯಕ್ರಮ ಜನವರಿ 19 ರಿಂದ 22 ರವರೆಗೆ ಜರುಗಲಿದೆ. ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲು ಮತ್ತು ಜ. 20, 21 ಮತ್ತು 22 ರಂದು ಮನೆ ಮನೆಗಳಿಗೆ ಭೇಟಿ ನೀಡಲು ತಾಲೂಕಿನಲ್ಲಿ 172 ಬೂತ್‌ಗಳಿದ್ದು 11 ಟ್ರಾನ್ಸಿಟ್ ತಂಡ, 2 ಮೊಬೈಲ್ ತಂಡ ರಚಿಸಲಾಗಿದೆ. 372 ಲಸಿಕಾ ತಂಡದ ಸದಸ್ಯರು, ಮೇಲ್ವಿಚಾರಕರಿದ್ದಾರೆ. ಐದು ವರ್ಷದೊಳಗಿನ 39,188 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮ ಸುಸೂತ್ರವಾಗಿ ನಿರ್ವಹಿಸಲು ಓರ್ವ ನೋಡಲ್ ಆಧಿಕಾರಿ, ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಧ್ಯಕ್ಷರು ಮತ್ತು ತಹಶೀಲ್ದಾರರು ತಾಲೂಕು ಟಾಸ್ಕ್‌ಫೋರ್ಸ್ ಸಮಿತಿ ಗುಲ್ಬರ್ಗ ಇವರು ನೇಮಿಸಿ ಆದೇಶಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹೆಸರು ಮತ್ತು ನೋಡಲ್ ಅಧಿಕಾರಿಗಳು, ಮತ್ತು ಹುದ್ದೆ ಕ್ರಮವಾಗಿ ಇಂತಿದೆ. ಸೊಂತ, ಡೊಂಗರಗಾಂವ-ವಲಯ ಶಿಕ್ಷಣಾಧಿಕಾರಿ(ನಾರ್ಥ್), ಫರತಾಬಾದ, ಹೊನ್ನಕಿರಣಗಿ-ವಲಯ ಶಿಕ್ಷಣಾಧಿಕಾರಿ(ಸೌತ್), ಹೀರೆ ಸಾವಳಗಿ, ಕಲ್ಲಹಂಗರಗಾ-ಶಿಶು ಅಭಿನೃದ್ಧಿ ಅಧಿಕಾರಿಗಳು(ಗ್ರಾಮೀಣ), ಔರಾದ್ ಹರಸೂರ-ಎ.ಇ.ಇ. ಜಿಲ್ಲಾ ಪಂಚಾಯತ್ ಗುಲ್ಬರ್ಗ, ಮಹಾಗಾಂವ, ಕಮಲಾಪೂರ-ಎ.ಇ.ಇ. ಪಿಡಬ್ಲ್ಯೂಡಿ ಗುಲ್ಬರ್ಗ ಮತ್ತು ನಂದೂರ(ಬಿ), ಶ್ರೀನಿವಾಸ ಸರಡಗಿ-ಎಇಇ ಸಣ್ಣ ನೀರಾವರಿ ಇಲಾಖೆ ಗುಲ್ಬರ್ಗ. ಆರೋಗ್ಯ ಕೇಂದ್ರಗಳಲ್ಲಿ ಮೇಲ್ವಿಚಾರಣೆ ಮಾಡಿ ಯಶಸ್ವಿಯಾಗಿ ಜರುಗಿಸುವಂತೆ ಅಧ್ಯಕ್ಷರು ಮತ್ತು ತಹಶೀಲ್ದಾರರು ತಾಲೂಕು ಟಾಸ್ಕ್‌ಫೋರ್ಸ್ ಸಮಿತಿ ಕೋರಿದೆ.