ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮನೆಮನೆಗಳಲ್ಲೂ ಭಾಗವತ ಶ್ಲೋಕಾನುವಾದ ಯೋಜನೆ

Rashmi Kasaragodu
Updated On : 19 Jan 2014, 11:23 am

ಗುಲ್ಬರ್ಗ: ಲೋಕಕಲ್ಯಾಣದ ದೃಷ್ಟಿಯಿಂದ ಮತ್ತು ಸಮಾಜದ ಎಲ್ಲಾ ವರ್ಗದವರ ಕ್ಷೇಮಾಭ್ಯುದಯಕ್ಕಾಗಿ ಉಡುಪಿ ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥ ಶ್ರೀಪಾದರು ಮನೆಮನೆಗಳಲ್ಲೂ ಭಾಗವತ ಶ್ಲೋಕಾನುವಾದದ ತಮ್ಮ ವಿಶಿಷ್ಟ ಯೋಜನೆಯ ಅಂಗವಾಗಿ ಗುಲ್ಬರ್ಗ ನಗರ ಸಂಚಾರ ಆರಂಭಿಸಿದ್ದಾರೆ.
ಜ. 17ರಂದೇ ನಗರ ಪ್ರವೇಶ ಮಾಡಿರುವ ಶ್ರೀಪಾದರು ಜ. 24 ರವರೆಗೂ ಇಲ್ಲಿ ವಾಸ್ತವ್ಯ ಹೂಡಿ ಮನೆ- ಮನಗಳಲ್ಲಿ ಭಾಗವತ ಜ್ಞಾನದ ಬೆಳಕನ್ನು ಬೆಳಗಿಸಲಿದ್ದಾರೆ. ಗುರುಗಳ ಷಷ್ಠ್ಯಬ್ಧಿ ಅಭಿವಂದನೆಯ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.  60 ಸಾರ್ಥಕ ವರ್ಷಗಳ ಧಾರ್ಮಿಕ ಜೀವನದ ಈ ಸಂದರ್ಭದಲ್ಲಿ ಗುರುಗಳು ಗುಲ್ಬರ್ಗ ನಗರದಲ್ಲಿ ಒಂದು ವಾರ ಸಂಚಾರದಲ್ಲಿದ್ದು ಪಾದಪೂಜೆ, ಗೃಹ ಭಾಗವತ ಶ್ಲೋಕಾನುವಾದ, ಪೂಜಾದಿಗಳಲ್ಲಿ ಭಾಗವಹಿಸಲಿದ್ದಾರೆ.
ಭಕ್ತಾದಿಗಳು ನವಲಿ ಕೃಷ್ಣಾಚಾರ್ಯ- 94486 52620, ರವಿ ಲಾತೂರಕರ್- 98455 66994 ಅಥವಾ ಸುಧೀಂದ್ರ ಕೆರೂರ್- 94489 02558 ಇವರನ್ನು ಸಂಪರ್ಕಿಸಬಹುದಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement