ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ

Rashmi Kasaragodu
Updated On : 19 Jan 2014, 11:20 am

ಅಫಜಲ್ಪುರ: ವಾಹನ ಚಾಲನೆ ಸಂದರ್ಭದಲ್ಲಿ ಸಂಚಾರಿ ನಿಯಮವನ್ನು  ಅರಿತು ಅನುಸರಿಸಬೇಕು ಎಂದು ಅಫಜಲ್ಪುರ ಪೊಲೀಸ್ ಠಾಣೆಯ  ಪಿಎಸ್‌ಐ ಸುರೇಶ ಬೆಂಡೆಗುಂಬಳ ಹೇಳಿದರು.  ಅವರು ಇಲ್ಲಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. 18 ವರ್ಷದೊಳಗಿನ ಯುವಕರು ಲಾರಿ, ಟೆಂಪೊ, ಜೀಪ್ ಮುಂತಾದ ವಾಹನಗಳನ್ನು ಓಡಿಸುತ್ತಾರೆ. ಇದು ಕಾನೂನು ಬಾಹಿರ. ವಾಹನ ಚಲಾವಣೆ ಮಾಡುವವರು ಸಂಬಂಧಪಟ್ಟ ಇಲಾಖೆಯಿಂದ ವಾಹನ ಚಾಲನೆ ಪರವಾನಗಿ ಪಡೆದುಕೊಳ್ಳಬೇಕು ಎಂದರು. ಸವಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲಾಖೆ ಪಟ್ಟಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಂಡಿದೆ. ವಾಹನ ಸವಾರರು, ಸಾರ್ವಜನಿಕರು ಇದರ ಉಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಎಎಸ್‌ಐ ನಜೀರ ಅಹ್ಮದ, ಪೊಲೀಸ್ ಸಿಬ್ಬಂದಿ ರಮೇಶ, ಎಲ್ದೆ ಭೀಮಾಶಂಕರ, ಸಿದ್ರಾಮಪ್ಪಾ ಧನ್ನಿ, ಚಂದ್ರಕಾಂತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement