ವಿಕಾಟ್ ಸಾಗರ್ ಸಂಸ್ಥೆಯಿಂದ ಡಾಂಬರೀಕರಣ
ಚಿಂಚೋಳಿ: ತಾಲೂಕಿನ ಛತ್ರಸಾಲಾ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತಗೊಂಡಿರುವ ವಿಕಾಟ್ ಸಾಗರ್ ಸಿಮೆಂಟ್ ಕಂಪನಿ ವ್ಯಾಪ್ತಿಯಲ್ಲಿ ಬರುವ ಛತ್ರಸಾಲಾ ಗ್ರಾಮದಿಂದ ಆಂಧ್ರಗಡಿಭಾಗದವರೆಗೆ ರಸ್ತೆ ಡಾಂಬರೀಕರಣಕ್ಕಾಗಿ ಒಟ್ಟು 3.80 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅನೂಪ ಕುಮಾರ ಸಕ್ಸೇನಾ ಹೇಳಿದರು. ಅವರು ವಿಕಾಟ್ ಸಾಗರ ಸಿಮೆಂಟ್ ಕಂಪನಿಯ ಮೊದಲ ವಾರ್ಷಿಕೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು, ವಿಕಾಟ್ ಸಾಗರ್ ಸಿಮೆಂಟಿನ ಬೇಡಿಕೆ 27 ಲಕ್ಷ ಟನ್ ಬೇಡಿಕೆಯಾಗಿದ್ದು, ಆದರೆ ಕೇವಲ ಶೇ. 30ರಷ್ಟು ಮಾರಾಟವಾಗಿದೆ. ಕಂಪನಿಯಲ್ಲಿ ಜಮೀನು ನೀಡಿದ ಕುಟುಂಬದ ಮಕ್ಕಳಿಗೆ ಶಿಕ್ಷಣಕ್ಕಾಗಿ ಆಂಗ್ಲ ಭಾಷೆಯಲ್ಲಿ ಶಾಲೆ ಪ್ರಾರಂಭಿಸಲಾಗಿದೆ. ಯುವಕರಿಗೆ ಐಟಿಐ ತರಬೇತಿ ನೀಡಲಾಗಿದೆ. ರೇಲ್ವೆ ಕ್ರಾಸಿಂಗ್ವರೆಗೆ ರಸ್ತೆಗೆ ರು. 1 ಕೋಟಿ ರೂಪಾಯಿ ನೀಡಲಾಗಿದೆ ಮತ್ತು 150 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನೂಪಕುಮಾರ ಸಕ್ಸೇನಾ ಹೇಳಿದರು. ಇಂಡಿಯಾ ವಿಕಾಟ ಮುಖ್ಯಸ್ಥ ಜಿಲ್ಲಿಸ್ ಡೋಮೋನೆಯರ್ ಪ್ರಧಾನ ವ್ಯವಸ್ಥಾಪಕ ಕೋದಂಡರಾಮ ರೆಡ್ಡಿ, ಉಪಾಧ್ಯಕ್ಷ ಕೃಷ್ಣಕುಮಾರ, ಡಿಜಿಎಂ ಸಜೀಕುಮಾರ, ಅಜೀತ ಪಾಟಿಲ್, ಅನಿಲ್ ರೆಡ್ಡಿ, ರಾಘವಪ್ರಸಾದ್, ಮಾರ್ಕೆಟಿಂಗ್ ಡೈರೆಕ್ಟರ್ ರವೀಂದ್ರ ಗೋಪಾಲರೆಡ್ಡಿ ಕಲ್ಲೂರ್ ಇನ್ನಿತರಿದ್ದರು.