ಸಾಲ ಪಡೆದವರಿಂದ ಮಾಹಿತಿಗಾಗಿ ಸಭೆ
ಗುಲ್ಬರ್ಗ: ಕೇಂದ್ರ ಸಚಿವಾಲಯದ ಸಲಹೆಯಂತೆ ಶೈಕ್ಷಣಿಕ ಸಾಲ ಪಡೆದವರಿಂದ ಮಾಹಿತಿ ಕಳುಹಿಸುವುದಕ್ಕಾಗಿ ಜ. 19 ರಂದು ಪಾಲಕರ ಸಭೆ ಕರೆಯಲಾಗಿದೆ ಎಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ತಿಳಿಸಿದ್ದಾರೆ. 2009ರಲ್ಲಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ ಶೈಕ್ಷಣಿಕ ಸಾಲಕ್ಕಾಗಿ ಬಡ್ಡಿಯನ್ನು ಸಬ್ಸಿಡಿ ರೂಪದಲ್ಲಿ ರು. 2597 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ. ಆದರೆ ಈ ಹಣ ಶೈಕ್ಷಣಿಕ ಸಾಲ ಪಡೆದವರ ಖಾತೆಗೆ ಜಮಾ ಆಗದಿರುವುದರಿಂದ ಬ್ಯಾಂಕ್‌ನವರು ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಪಾಲಕರಿಂದ ಶೇ. 13 ರಿಂದ 15ರವರೆಗೆ ಬಡ್ಡಿ ಪಡೆಯುತ್ತಿದ್ದಾರೆ. ಈ ಬಡ್ಡಿ ತುಂಬಲಾಗದೆ ಎಷ್ಟೋ ವಿದ್ಯಾರ್ಥಿಗಳಿಗೆ ಬ್ಯಾಂಕುಗಳು ಮುಂದಿನ ಕಂತು ನೀಡದಿರುವುದರಿಂದ ನೂರಾರು ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಅವರು ದೂರಿದರು.