ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸ್ವಯಂ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ

Rashmi Kasaragodu
Updated On : 19 Jan 2014, 11:20 am

ಅಫಜಲ್ಪುರ: ತಾಲೂಕಿನ ಮಣ್ಣೂರ ಗ್ರಾಪಂ ಮಣ್ಣೂರ ಅವರ ಅಡಿಯಲ್ಲಿ 2013 ಹಾಗೂ 2014ರ ವರೆಗೆ ಆಯೋಜಿಸಿದ್ದ ಸಾಕ್ಷರತಾ ಭಾರತ ಕಾರ್ಯಕ್ರಮದಲ್ಲಿ ಸ್ವಯಂ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಸದರಿ ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿಗಳೂ ಹಾಗೂ ಮಣ್ಣೂರ ಗ್ರಾಪಂ ಅಧ್ಯಕ್ಷರಾದ ರಮೇಶ ಬಾಕೆ ಅವರು ಉದ್ಘಾಟನೆ ನೆರವೇರಿಸಿದರು. ತಾಲೂಕ ಸಾಕ್ಷರ ಸಮಿತಿಯ ಸಂಯೋಜಕರಾದ ಧನ್ಯಕುಮಾರ ಮಾತನಾಡಿ, ಸಾಕ್ಷರ ಭಾರತ ಕಾರ್ಯಕ್ರಮದಡಿಯಲ್ಲಿ ಸಾಕ್ಷರ ಕರ್ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅನಕ್ಷರಸ್ಥರನ್ನು ಸಾಕ್ಷರಸ್ಥನ್ನಾಗಿಸಿಬೇಕು ಪ್ರಬದ್ಧ ರಾಷ್ಟ್ರ ನಿರ್ಮಾಣದಲ್ಲಿ ಸ್ವಯಂ ಸೇವಕಿಯರ ಪಾತ್ರ ತುಂಬಾ ದೊಡ್ಡದು ಎಂದು ಹೇಳಿದರು. ಅನಕ್ಷರಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಮ ಲೋಕ ಶಿಕ್ಷಣ ಸಮಿತಿಯ ಸದಸ್ಯಕಾರ್ಯದರ್ಶಿಗಳಾದ ಗೈಬುಸಾಬ ಆಳಂದ ಸಂಪನ್ಮೂಲ ಶಿಕ್ಷಕರಾದ ಗಂಗಾಧರ ಪೊದ್ದಾರ ಎಂ.ಎಸ್. ಚಲವಾದಿ ಸ್ವಯಂ ಸೇವಕಿಯರಿಗೆ ಶಿಕ್ಷಕರು ತರಬೇತಿ ನಿಡಿದರು. ಈ ಕಾರ್ಯಕ್ರಮದಲ್ಲಿ ಮಹೇಶ ನನ್ನಾಜಿ ಮಹಾದೇವಿ ಕರೂಟಿ ಈರಣ್ಣಾ ಜಮಾದಾರ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement