ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧಮ್ಮಕ್ರಾಂತಿ ಉತ್ಸವ ಸಂಪನ್ನ ಸಮಾರಂಭದಲ್ಲಿ ಸಚಿವ ಮಲ್ಲಿಕಾರ್ಜುನ ಖರ್ಗೆ

Mainashree
Updated On : 20 Jan 2014, 10:50 am

ಬೌದ್ಧ ಧರ್ಮ ವೈಜ್ಞಾನಿಕ ತಳಹದಿಯುಳ್ಳದ್ದು
ಕ.ಪ್ರ. ವಾರ್ತೆ   ಗುಲ್ಬರ್ಗ   ಜ.19
ಪ್ರಬುದ್ಧ ಭಾರತ ನಿರ್ಮಾಣ ಸಂಕಲ್ಪದೊಂದಿಗೆ ಇಲ್ಲಿನ ಸಿದ್ದಾರ್ಥ ನಗರದ ದೀಕ್ಷಾ ಭೂಮಿಯಲ್ಲಿ ಜ. 15ರಿಂದ ಆರಂಭವಾಗಿದ್ದ ಧಮ್ಮಕ್ರಾಂತಿ ಉತ್ಸವ ಭಾನುವಾರ ವಿಧ್ಯುಕ್ತವಾಗಿ ಸಮಾರೋಪಗೊಂಡಿತು.
ಭಗವಾನ್ ಬುದ್ಧ ಹಾಗೂ ಅಂಬೇಡ್ಕರ್ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ವೈಚಾರಿಕ ತಳಹದಿಯ ಮೇಲೆ ಚರ್ಚೆಗಳು, ಗೋಷ್ಠಿ, ಚಿಂತನೆಗಳಿಗೆ ಆದ್ಯತೆ ನೀಡಿದ್ದ ಉತ್ಸವದ ಸಮಾರೋಪದಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು.
ಭಗವಾನ್ ಬುದ್ಧನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಖರ್ಗೆ, ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಲ್ಪಟ್ಟಿರುವ ಬೌದ್ಧ ಧರ್ಮ ಜಾಗತಿಕವಾಗಿ ತುಂಬ ಪ್ರಸಿದ್ಧವಾಗಿದೆ. ಈ ಧರ್ಮದಲ್ಲಿ ಹಿಂಸೆಗೆ ಎಲ್ಲಿಯೂ ಅವಕಾಶವಿಲ್ಲ. ಇಂತಹ ವೈಜ್ಞಾನಿಕ ಧರ್ಮವನ್ನು ಡಾ. ಅಂಬೇಡ್ಕರ್ ಅಪ್ಪಿಕೊಂಡರು. ಈ ಧರ್ಮದ ವೈಚಾರಿಕ ಕ್ರಾಂತಿಗಾಗಿ ಏರ್ಪಾಡಾಗಿರುವ ಉತ್ಸವ ನಿಜಕ್ಕೂ ಸ್ತುತ್ಯರ್ಹ ಕೆಲಸ ಎಂದರು.
ಜಾಗತಿಕ ಧರ್ಮ: ಇಂದು ನೈತಿಕತೆ, ಸಂಸ್ಕೃತಿ ಕಾಪಾಡಲು ಅಗತ್ಯಗತ್ಯವಾಗಿದೆ. ಬೌದ್ಧ ಧರ್ಮದಲ್ಲಿ ಇದೆಲ್ಲವೂ ಇದೆ. ಆದ್ಗರಿಂದಲೇ ಈ ಧರ್ಮ ಜಾಗತಿಕವಾಗಿ ಹಾಗೂ ತುಂಬ ವ್ಯಾಪಕವಾಗಿ ಹರಡಿದೆ ಎಂದರು.
ಖಮರುಲ್ ಇಸ್ಲಾಂ ಮಾತನಾಡುತ್ತ, ಬೌದ್ಧ ಧರ್ಮ ವೈಜ್ಞಾನಿಕವಾದ ಗಟ್ಟಿ ಬುನಾದಿ ಹೊಂದಿರುವ ವಿಶಿಷ್ಟ ಧರ್ಮ. ಗುಲ್ಬರ್ಗದಲ್ಲಿ ಇಂತಹ ವಿಚಾರಧಾರೆಗಳನ್ನು ಹರಡುವ ಸಮಾರಂಭ ನಿಜಕ್ಕೂ ಹೆಮ್ಮೆಯದ್ದಾಗಿದೆ ಎಂದರು.
ವಿವಿಧೆಡೆಯಿಂದ ಪ್ರಮುಖರು: ಮಹಾರಾಷ್ಟ್ರದ ಪೂರ್ಣಾದಿಂದ ಆಗಮಿಸಿದ್ದ ಉಪಗುಪ್ತ ಭಂತೆ, ಮುಳವಾದ ಖೇಮೋ ಧಮ್ಮೋ, ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಗುಲ್ಬರ್ಗ ಹಿರಿಯರಾದ ಶಿವರಾಂ ಮೋಘಾ ಅಧ್ಯಕ್ಷರಾಗಿದ್ದರು.
ಇದೇ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರ. ಕಾರ್ಯದರ್ಶಿ ವೆಂಕಟಯ್ಯ, ಮಂಜುನಾಥ ಸಿಂಗೆ ಐಪಿಎಸ್ ಅಧಿಕಾರಿ, ಟಿಎಂ ನಾಯ್ಕ್ ಇವರನ್ನು ಸನ್ಮಾನಿಸಲಾಯ್ತು. ಡಾ. ವಿಠ್ಠಲ ದೊಡ್ಮನಿ, ಸೂರ್ಯಕಾಂತ ನಿಂಬಾಳ್ಕರ್, ಸಂತೋಷ ಮೇಲಿನಮನಿ, ತುಳಸೀರಾಂ ನಾಯಕ ಸೇರಿದಂತೆ ಸಂಘಟಕರೆಲ್ಲರೂ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement