'ಪ್ರತಿ ಮಗುವಿಗೂ ಲಸಿಕೆ ಹಾಕಿಸಿ'
ಗುರುಮಠಕಲ್: ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸಲು ದೇಶದ ಪ್ರತಿಯೊಂದು 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕಂದಕೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯ ಕುಮಾರ ವಿ.ಪಾಟೀಲ ಹೇಳಿದರು.
ಕಂದಕೂರ ಗ್ರಾಮದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಗುವಿಗೆ ಲಸಿಕೆ ಹಾಕಿ ಮಾತನಾಡಿದರು. ಸಮೃದ್ಧ ಕರ್ನಾಟಕ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಾ. ಸಿದ್ದಲಿಂಗರೆಡ್ಡಿ ಪಾಟೀಲ ಮಾತನಾಡಿದರು. ಬಿಹೆಚ್ಇ ಕೊಳ್ಳೊಳ್ಳಿ, ಪ್ರದೀಪ ಕುಲಕರ್ಣಿ, ನಿರ್ಮಲ, ಎಲ್ಲಮ್ಮ, ಅಶೋಕರೆಡ್ಡಿ, ಬಸವರಾಜ ಸಜ್ಜನ್ ಸೇರಿ ಅನೇಕರು ಇದ್ದರು.