ಫೆ.22ಕ್ಕೆ ಚಿತ್ತಾಪುರದಲ್ಲಿ ಸೇವಾಲಾಲರ ಜಯಂತಿ
ಚಿತ್ತಾಪುರ: ಬಂಜಾರ ಸಮಾಜದ ಗುರು ಸಂತ ಸೇವಾಲಾಲ ಮಹಾರಾಜರ 275ನೇ ಜಯಂತ್ಯುತ್ಸವವನ್ನು ಫೆ. 22 ರಂದು ಚಿತ್ತಾಪುರ ತಾಲೂಕಿನಲ್ಲಿ ಅಚರಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಬಂಜಾರ ಸಮಾಜವು ತೀರ ಹಿಂದುಳಿದ ಜನಾಂಗವಾಗಿದೆ. ಈ ಸಮಾಜದ ಒಳಿತಿಗಾಗಿ ಶ್ರಮಿಸಿದ ಸಂತ ಸೇವಾಲಾಲ ಮಹಾರಾಜರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಹಾಗಾಗಿ ಅವರ ಜನ್ಮದಿನೋತ್ಸವವನ್ನು ತಾಲೂಕಿನಲ್ಲಿ ಅತೀ ವಿಜೃಂಭಣೆಯಿಂದ ಆಚರಿಸೋಣ ಎಂದು ಹೇಳಿದರು.
ಸಿದ್ಧತೆ: ಇದೇ ಸಂದರ್ಭದಲ್ಲಿ ಸಮಾಜದ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಬಂಜಾರ ಸೇವಾ ಸಂಘವನ್ನು ರಚಿಸಿ ಅಧ್ಯಕ್ಷರನ್ನಾಗಿ ಪೋಮು ರಾಠೋಡ ಲಾಡ್ಲಾಪುರ, ಪ್ರ. ಕಾರ್ಯದರ್ಶಿಯಾಗಿ ಗೋಪಾಲ್ ರಾಠೋಡ ಚಿತ್ತಾಪುರ ಅವರನ್ನು ಅಯ್ಕೆ ಮಾಡಿ, ಜಯಂತ್ಯುತ್ಸವ ಸಿದ್ಧತೆ ಮಾಡಿಕೊಳ್ಳಲು ಅವರಿಗೆ ಸಮಾಜದ ನಾಯಕರು, ಢಾವಮ ಕಾರಭಾರಿ ಅವರ ಸಮ್ಮುಖದಲ್ಲಿ ತಿಳಿಸಲಾಯಿತು. ಪ್ರಾರಂಭದಲ್ಲಿ ವೀರ ಮರಣ ಹೊಂದಿದ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಅತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಶಾಸಕ ವಾಲ್ಮೀಕಿ ನಾಯಕ, ಪುರಸಭೆ ಸದಸ್ಯ ರಾಮದಾಸ ಚವ್ವಾಣ, ಹೀರು ರಾಠೋಡ, ಪ್ರಕಾಶ ನಾಯಕ, ಅಂಬಾದಾಸ ಜಾಧವ, ವಿಜಯಕುಮಾರ ನಾಯಕ, ತರಿ ಜಾಧವ, ಮುಖಂಡರಾದ ರವಿ ಅರ್.ಬಿ ಚವ್ಹಾಣ, ಗೋವಿಂದ ನಾಯಕ, ನೀಲಕಂಠ ಪವಾರ, ಶಿವರಾಮ ಪವಾರಮ ಬೋರು ರಾಠೋಡ, ಪ್ರೇಮ ಕುಮಾರ, ಹಣಮಂತ ಚವ್ವಾಣ, ಶಂಕರ ಚವ್ವಾಣ, ರವಿ ರಾಠೋಡ, ಭೀಮಸಿಂಗ ಚವ್ವಾಣ, ಹನುಮಾನಸಿಂಗ್, ಭೋಜು ರಾಠೋಡ, ಮೋತಿರಾಮ ರಾಠೋಡ, ಮೇಘನಾಥ ರಾಠೋಡ, ಟೋಪಸಿಂಗ್, ಪೋಮು ಚವ್ವಾಣ, ಮೋಹನ ಯಾಗಪುರ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.