ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ರಾಷ್ಟ್ರೀಯ ಸಾಮಾಜಿಕ ಭದ್ರತೆ ವರದಾನ'

Mainashree
Updated On : 20 Jan 2014, 10:49 am

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.19
ಕೇಂದ್ರ ಸರ್ಕಾರವು ನಿರಾಶ್ರಿತ ದುರ್ಬಲರಿಗೆ ರಾಷ್ಟ್ರೀಯ ಸಾಮಾಜಿಕ ಭದ್ರತೆ ಅಡಿಯಲ್ಲಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ವೇತನ, ಮನಸ್ವಿನಿ, ಮೈತ್ರಿ ಮುಂತಾದ ಹಲವಾರು ಯೋಜನೆಗಳನ್ನು ರೂಪಿಸಿದ್ದು, ನಿರಾಶ್ರಿತರಿಗೆ ಹಾಗೂ ದುರ್ಬಲರಿಗೆ ವರದಾನವಾಗಿದೆ ಎಂದು ತಾಪಂ ಸದಸ್ಯೆ ಕವಿತಾ ಜಗದೇವಪ್ಪ ರಾಮಸ್ ಅಭಿಪ್ರಾಯಪಟ್ಟರು.
ಅವರು ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಗುಲ್ಬರ್ಗ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಗ್ರಾಮಾಂತರ ಗುಲ್ಬರ್ಗ ಹಾಗೂ ಗ್ರಾಪಂ, ಹರಸೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸಾಮಾಜಿಕ ಭದ್ರತೆ ಕುರಿತು ಗ್ರಾಪಂ ಆವರಣ ಹರಸೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದುಪಯೋಗ: ವಿಧವೆಯರಿಗೆ, ವೃದ್ಧರಿಗೆ ಯಾರ ಅಶ್ರಯ ಇಲ್ಲದಲ್ಲಿ ಸರ್ಕಾರವೇ ಅವರ ಆಶ್ರಯಕ್ಕಾಗಿ ಯೋಜನೆಗಳನ್ನು ರೂಪಿಸಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ನಾಡ ಕಚೇರಿಯ ರೆವಿನ್ಯೂ ಅಧಿಕಾರಿ ಕೆ. ಶೇಷಗಿರಿ ನಾಯಕ ಮಾತನಾಡಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಮನಸ್ವಿನಿ ಮೈತ್ರಿ ಮುಂತಾದ ಕಾರ್ಯಕ್ರಮಗಳ ಪೂರ್ಣ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಶಿವರಾಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ರಮೇಶ ಭೀಮಸಿಂಗ್, ಸದಸ್ಯರಾದ ಶಿವರಾಯ ಕೋರಿ, ಶರಣು ನಾಯಕೊಡಿ, ಮುಖ್ಯೋಪಾಧ್ಯಾಯ ಹಣಮಂತಪ್ಪ ಭಜತ್ರಿ, ಮೇಲ್ವಿಚಾರಕಿ ಕಾಂತಮ್ಮ ಇದ್ದರು. ಕ್ಷೇತ್ರ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement