ಲಸಿಕೆ ಮಗುವಿಗೆ ಜೀವಾಮೃತ: ಜಿಲಾನಿ
ಯಾದಗಿರಿ: ಮಾರಕ ರೋಗದಿಂದ ಮುಕ್ತರಾಗಿಸಲು ತಾಯಿಯಂದಿರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ, ಅದು ಜೀವಾಮೃತ ಎಂದು ಜಿಪಂ ಸಿಇಒ ಎಸ್.ಎ. ಜಿಲಾನಿ ಹೇಳಿದರು.
ನಗರದ ಅಂಬೇಡ್ಕರ್ ಚೌಕ್ ಹತ್ತಿರದ ದುರ್ಗಮ್ಮದೇವಿ ದೇವಸ್ಥಾನದಲ್ಲಿ ಮೊದಲ ಸುತ್ತಿನ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಗು ಆರೋಗ್ಯವಂತವಾಗಿ ಮುಂದಿನ ಭವಿಷ್ಯ ಉತ್ತಮವಾಗಿರಲು 5 ವರ್ಷದೊಳಗಿನ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿ. ಪೋಲಿಯೋ ಮುಕ್ತನಾಡು ನಮ್ಮದಾಗಲು ಪ್ರತಿಯೊಬ್ಬ ಸಮುದಾಯದವರಲ್ಲಿ ಕಾಳಜಿ ಬರಬೇಕು ಎಂದರು.
ಜಿಲ್ಲಾ ಆರೋಗ್ಯಧಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ, ತಾಲೂಕ ಆರೋಗ್ಯಧಕಾರಿ ಡಾ. ಚಂದ್ರಕಾಂತ ನರಿಬೊಳ್ಳಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಹಯ್ಯಾಳಪ್ಪನೋರ್, ಜಿಲ್ಲಾ ಶಸ್ತ್ರತ ಚಿಕಿತ್ಸಕ ಡಾ. ಭಗವಂತ ಅನವರ್, ನಗರಸಭೆ ಅಧ್ಯಕ್ಷ ಮಹ್ಮದ್ ಇಸಾಕ್, ನಗರಸಭೆ ಆಯುಕ್ತ ಖಾಜಾ ಮೈನೋದ್ದನ್, ಆಯುಷ್ ಅಧಿಕಾರಿ ಡಾ. ವಂದನಾ ಗಾಳಿ, ತಹಸೀಲ್ದಾರ್ ಮಲ್ಲಿಕಾರ್ಜುನ ಪೊಲೀಸ್, ನಗರಸಭೆ ಸದಸ್ಯರಾದ ಶ್ಯಾಮಸನ್ ಮಾಳಿಕೇರಿ, ಪೀರ ಅಹ್ಮದ್, ಸೇಖ್ ಜಕೀಯೊದ್ದನ್, ಸುನೀಲ್ ಮುತ್ತಂಗಿ ಇದ್ದರು.