ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಲಸಿಕೆ ಹಾಕಿಸಿ ಆರೋಗ್ಯ ಗಳಿಸಿ: ಸಾಲಿಮಠ

Mainashree
Updated On : 20 Jan 2014, 10:46 am

ಶಹಾಪುರ: ಮಗುವಿಗೆ ಜೀವನಾಮೃತದಂತಿರುವ ಪಲ್ಸ್‌ಪೋಲಿಯೋ ಹನಿ ಹಾಕಿಸಿ ಆರೋಗ್ಯಭಾಗ್ಯ ಗಳಿಸುವುದು ಪ್ರಮುಖ ಕಾರ್ಯ ಎಂದು ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಗುರುಲಿಂಗಯ್ಯಸ್ವಾಮಿ ಸಾಲಿಮಠ ತಿಳಿಸಿದರು. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲೈಯನ್ಸ್ ಕ್ಲಬ್ ಶಹಾಪುರ ಮತ್ತು ಅಂಗವಿಕಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಗುವಿಗೆ ಹನಿ ಹಾಕುವ ಮೂಲಕ ಮಾತನಾಡಿ, ಭಾರತ ಲಸಿಕೆ ಕಾರ್ಯಕ್ರಮವನ್ನು ಕಳೆದ ಹಲವು ವರ್ಷಗಳಿಂದ ಆಂದೋಲನ ರೂಪದಲ್ಲಿ ತೆಗೆದುಕೊಂಡು ಇಡೀ ರಾಷ್ಟ್ರವನ್ನು ಪೋಲಿಯೋ ಮುಕ್ತ ರಾಷ್ಟ್ರ ಮಾಡಲು ಶ್ರಮಿಸಿದ್ದು ವಿಶ್ವದಲ್ಲಿಯೇ ಭಾರತ ಹೆಮ್ಮೆಪಡುವಂತಾದ್ದು ಎಂದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಜಗದೀಶ ಉಪ್ಪಿನ್, ಲಯನ್ಸ್ ಕ್ಲಬ್ ಪ್ರಮುಖರಾದ ಚಂದ್ರಶೇಖರ ಲಿಂಗದಳ್ಳಿ, ಮಲ್ಲಿಕಾರ್ಜುನ ಕಾಡಂಗೇರಾ, ವಿಜಯಕುಮಾರ ಹೊನ್ಕಲ್, ಡಾ.ಎಸ್. ಪಟ್ಟಣಶಟ್ಟಿ, ಆರ್. ಪ್ರಕಾಶರಾಜ ಮತ್ತು ಅಂಗವಿಕಲ ಸಂಘದ ವೀರಕುಮಾರ ರಂಗಂಪೇಟೆ, ಮಂಜುಳಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement