ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಡ್ಡರು ಆಧುನಿಕತೆಯತ್ತ ಹೆಜ್ಜೆ ಹಾಕಲಿ

Mainashree
Updated On : 20 Jan 2014, 10:48 am

ಕ.ಪ್ರ. ವಾರ್ತೆ   ಆಳಂದ   ಜ.19
ಹಳೆಯ ಕುಲಕಸುಬನ್ನು ಬಿಟ್ಟು, ಗುಣಮಟ್ಟದ ಶಿಕ್ಷಣ ಪಡೆದು ಬೋವಿ ಸಮಾಜದ ಜನರು ಅಭಿವೃದ್ಧಿ ಹೊಂದಲು ಆಧುನಿಕ ಯುಗದತ್ತ ಹೆಜ್ಜೆ ಹಾಕಬೇಕೆಂದು ಉತ್ತರ ಕರ್ನಾಟಕ ಬೋವಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸುಭಾಷ್ ಬನಪಟ್ಟಿ ಕರೆ ನೀಡಿದರು.
ತಾಲೂಕಿನ ನಿಂಬರ್ಗಾ ಗ್ರಾಮದ ಬೋವಿ ನಗರದಲ್ಲಿ ನಡೆದ ಶರಣ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತತ್ವಾದರ್ಶ: 12ನೇ ಶತಮಾನದಲ್ಲಿ ಸಿದ್ದರಾಮೇಶ್ವರರು ಕೆರೆ ಕಟ್ಟಿ, ಗುಡಿ ಗುಂಡಾರಗಳನ್ನು ನಿರ್ಮಾಣ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಇಷ್ಟೊಂದು ಪವಾಡ ಮಾಡಿದ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ನಮ್ಮ ಇತಿಹಾಸ ಪರಂಪರೆ ಮೆಲುಕು ಅಗತ್ಯವಾಗಿದೆ. ದೇಶದಲ್ಲಿ ಐತಿಹಾಸಿಕ ಕೋಟೆ, ಕೋತ್ತಲಗಳು ನಿರ್ಮಿಸಿದರೂ ಅದನ್ನು ವೀಕ್ಷಿಸುವ  ಭಾಗ್ಯವಿಲ್ಲ. ವಿವಿಧ ಇಲಾಖೆಗಳಲ್ಲಿ ಬಹಳಷ್ಟು ಸೌಲಭ್ಯಗಳಿವೆ. ಗ್ರಾಮೀಣ ಭಾಗದಲ್ಲಿ ನೆಲಸಿರುವ ಜನರಿಗೆ ಸರಕಾರಿ ಯೋಜನೆಗಳ ಅರಿವೆ ಇಲ್ಲ. ಕೇಳಲು ಹೋದರೂ ಕೈಗೇಟುಕುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಅಸಂಘಟನೆ ಮತ್ತು ಅನಕ್ಷರತೆ. ಇಂತಹ ವ್ಯವಸ್ಥೆಯನ್ನು ಹೊಡೆದೊಡಿಸಿ ಸುಂದರ ಸಮಾಜ ನಿರ್ಮಾಣಕ್ಕೆ ಯುವ ಜನರು ಸಜ್ಜಾಗಬೇಕೆಂದು ಕಿವಿಮಾತು ಹೇಳಿದರು.
   ಸಮಾಜದ ಯುವ ಮುಖಂಡ, ಪತ್ರಕರ್ತ ಅರ್ಜುನ ಬಂಡೆ, ಚಂದ್ರಶೇಖರ ಎನ್. ಗುಂಡನಕರ್ ಮಾತನಾಡಿದರು. ಬಸಣ್ಣ ಬನಪಟ್ಟಿ, ಬರಮಣ್ಣ ಕಾರಬಾರಿ, ಹುಲಗಪ್ಪ ವಿಠಲಕರ್, ಭೀಮಣ್ಣ ಪಿರೋಜ, ಪಿಂಟು  ಪಿರೋಜ ಸೇರಿದಂತೆ ಅನೇಕ ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement