ಸಿದ್ದರಾಮೇಶ್ವರ ಭವನಕ್ಕೆ ಶಾಸಕರಿಂದ ಅಡಿಗಲ್ಲು
ಆಳಂದ: ಪಟ್ಟಣದ ಬೋವಿ ವಡ್ಡರ ಸಮಾಜದ ಬಡಾವಣೆಯಲ್ಲಿ ಶಾಸಕರ 5 ಲಕ್ಷ ರೂಪಾಯಿ ನಿಧಿಯಡಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಭವನ ನಿರ್ಮಾಣಕ್ಕೆ ಶಾಸಕ ಬಿ.ಆರ್. ಪಾಟೀಲ್ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ, ಶಾಸಕರು, ಭವನ ನಿರ್ಮಾಣದಿಂದ ಸ್ಥಳೀಯರು ಮತ್ತು ಗ್ರಾಮೀಣ ಭಾಗದ ಜನರು ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವುದು ಸಾಮಾನ್ಯ. ಆದರೆ, ವ್ಯವಸ್ಥಿತವಾಗಿ ಸಮಾಜದ ಜನರು ಒಂದಡೆ ಸೇರಲು ಸೂಕ್ತವಾದ ಸ್ಥಳವಿಲ್ಲದಂತಾಗಿದೆ. ಭವನ ನಿರ್ಮಾಣದಿಂದ ಬೋವಿ ಜನರ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ್, ಬೋವಿ ಸಮಾಜದ ವಿಭಾಗೀಯ ಮುಖಂಡ ಸುಭಾಷ ಬನ್ನಪೇಟ, ಜಿಪಂ. ಎಇಇ ಅಬ್ದುಲ್ ಸಲಾಂ, ಸಮಾಜದ ಅಧ್ಯಕ್ಷ ತಾಯಪ್ಪ ಗುತ್ತೇದಾರ, ಅಣಪ್ಪಾ ಗುತ್ತೇದಾರ, ದೇವೆಂದ್ರ ದಂಡಗುಲೇ, ಶೆಟ್ಟೆಪ್ಪ ಗುತ್ತೇದಾರ, ಬಡಪ್ಪಾ ಕೆ. ದಂಡಗೂಳೆ, ಅಂಬಣ್ಣಾ ಕುಸಳಕರ್, ಹಣಮಂತ ಕುಸಳಕರ್, ದೇವಿಂದ್ರಪ್ಪಾ ಎಂ. ದಂಡಗುಲೆ ಅನೇಕರು ಪಾಲ್ಗೊಂಡಿದ್ದರು.