ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

1ಕ್ಕೆ ಒಂದು ಕೆ.ಜಿ. ಟೊಮೆಟೋ!

Mainashree
Updated On : 21 Jan 2014, 10:01 am

ಕ.ಪ್ರ. ವಾರ್ತೆ   ರಾಯಚೂರು   ಜ.20
ಮಳೆ ತಂದ ಸಮೃದ್ಧಿ ಇಲ್ಲಿನ ರೈತರ ಆರ್ಥಿಕ ಪರ್ನ್ಥಿತಿ ಸುಧಾರಿಸಲಿಲ್ಲ. ಮಾರುಕಟ್ಟೆಯಲ್ಲಿನ ದರ ಕ್ನುತ ತರಕಾರಿ ಬೆಳೆದವರ ಬದುಕಿಗೆ ಸಂಕಷ್ಟದ ಸರಮಾಲೆ ತಂದೊಡ್ಡಿದೆ. ಹೊಲದಲ್ಲಿ ಕೊಳೆಯುತ್ತಿರುವ ಟೊಮೆಟೋ ಕಿತ್ತು ಹಾಕುವ ಕಾರ್ಯಕ್ಕೆ ತಾಲೂಕಿನ ರೈತರು ಈಗ ಮುಂದಾಗಿದ್ದಾರೆ.
ತಾಲೂಕಿನ ಕಡಗಂದೊಡ್ಡಿ, ಚಂದ್ರಬಂಡಾ ಮತ್ತಿತರೆ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಟೊಮೆಟೋ, ಹೂಕೋಸು ಬೆಳೆದವರ ಸದ್ಯದ ದ್ನ್ಥುತಿಯ ಚಿತ್ರಣವಿದು.
ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಪ್ರದೇಶದಲ್ಲಿ ಟೊಮೆಟೋ ಬೆಳೆದು ಉತ್ತಮ ಫಸಲು ಕಂಡಿದ್ದ ರೈತರೀಗ ದರ ಕ್ನುತ ದಿಂದ ತಲೆ ಮೇಲೆ ಕೈಹೊತ್ತಿದ್ದಾರೆ. ರಾಯಚೂರಿನ ಎಂಪಿಎಂ್ನ ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಕೇಳುವವರೇ ಇಲ್ಲವಾಗಿದೆ.
ಕೆಲವೇ ಕೆಲ ತಿಂಗಳುಗಳ ಹಿಂದೆ ಉತ್ತಮ ಬೆಲೆ ಕಂಡಿದ್ದ ತರಕಾರಿ ಮಾರುಕಟ್ಟೆಯಲ್ಲಿ ಈಗ ದರ ಕ್ನುತದದ್ದೇ ಚರ್ಚೆ. ತರಕಾರಿ ಹೊತ್ತು ಆಸೆಗಣ್ಣಿಮಿಂದ ಮಾರುಕಟ್ಟೆಗೆ ದಿನವೂ ನೂರಾರು ರೈತರು ಧಾವಿಸುತ್ತಿದ್ದು ದರ ಮಾತ್ರ ಪ್ರತಿ ಕೆ.ಜಿ. ಟೊಮೆಟೋಗೆ 1 ಸಹ ್ನಗುತ್ತಿಲ್ಲ ಎಂಬುದು ಕಟು ಸತ್ಯ.
ದರ ಕ್ನುತ: ಕಳೆದ ಕೆಲ ದಿನಗಳಿಂದ ನಗರದ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಸೇರಿದಂತೆ ಎಲ್ಲ ತರಕಾರಿ ಖರೀದಿಗೆ ಖರೀದಿದಾರರು ನಿರಾಕರಿಸುತ್ತಿದ್ದಾರೆ. ಟೊಮೆಟೋ ತಲಾ 25 ಕೆ.ಜಿ.ಯ ಪ್ರತಿ ಕ್ಯಾನ್ಗೆ 25ಗೆ ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ರೈತರು ಮಾರುಕಟ್ಟೆಗೆ ತಂದ ಟೊಮೆಟೋ ಸಾಗಣೆ ವೆಚ್ಚ ಭರಿಸಲು ಸಾಧ್ಯವಾಗದಂಥ ್ನ್ಥತಿಯಿದೆ. ತಾಲೂಕಿನ ರೈತರು ಪ್ರತಿ ಎಕರೆಗೆ 40ರಿಂದ 50 ಸಾವಿರ ರು. ವೆಚ್ಚ ಮಾಡಿದ್ದಾರೆ. 10 ಗ್ರಾಪಂ ಬಿತ್ತನೆ ಬೀಜಕ್ಕೆ 600ರಿಂದ 800 ರು. ತೆತ್ತಿದ್ದಾರೆ. ಉತ್ತಮ ಫಸಲು ಬಂದರೂ ಲಾಭ ಮಾತ್ರ ದಕ್ಕಿಲ್ಲ. ಹಾಗಾಗಿ ರೈತರು ತರಕಾರಿ ಬೆಳೆದು ಕೈ ಸುಟ್ಟುಕೊಂಡಿದ್ದಾರೆ.
ಟೊಮೆಟೋ ಬೆಳೆಗೆ ಮಾರುಕಟ್ಟೆಯಲ್ಲಿ ದರ ಕ್ನುತ ಕಂಡಿದ್ದರಿಂದ ತಾಲೂಕಿನ ವಿವಿಧ ಹಳ್ಳಿಗಳ ರೈತರು ಟೊಮೆಟೋ ಮಾರು ಕಟ್ಟೆಗೆ ತರದೇ ಹೊಲದಲ್ಲಿ ಬೆಳೆ ಕೊಳೆಯುತ್ತಿರುವುದರಿಂದ ಕಿತ್ತಿ ಹಾಕಲು ಮುಂದಾಗಿದ್ದಾರೆ. ಈಗಾಗಲೇ ತಾಲೂಕಿನ ವಿವಿಧೆ ಡೆಯ ಗ್ರಾಮಗಳಲ್ಲಿ ರೈತರು ತಮ್ಮ ಜಾನುವಾರುಗಳಾದ ಕುರಿ, ಎಮ್ಮೆಗಳನ್ನು ಟೊಮೆಟೋ ಬೆಳೆಯನ್ನು ಮೇಯಲು ಬಿಟ್ಟಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿ ರೈತ: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಂಗದೊಡ್ಡಿ, ರೈತರ ಟೊಮೆಟೋ ಬೆಳೆಗೆ ಬೆಲೆಯಿಲ್ಲ. ಕನಿಷ್ಠ 1 ಪ್ರತಿ ಕೆ.ಜಿ.ಗೂ ಮಾರಾಟವಾಗುತ್ತಿಲ್ಲ. ಹೊಲದಲ್ಲಿ ಬೆಳೆಯಿರ್ನಿಕೊಳ್ಳುವ ಬದಲು ಮುಂದಿನ ಬೆಳೆ ಬೆಳೆಯುವ ನಿಟ್ಟಿನಲ್ಲಿ ಟೊಮೆಟೋ ಕಿತ್ತು ಹಾಕುತ್ತಿರುವುದಾಗಿ ತಿಳ್ನಿದ್ದಾರೆ.
ಎರಡು ವರ್ಷದ ಬರದ ನಂತರ ಸಮೃದ್ಧಿ ಕಂಡಿದ್ದ ರೈತರಿಗೀಗ ಸಮೃದ್ಧಿಯೂ ಶಾಪವಾಗಿ ಪರಿಣಮ್ನಿದೆ. ಟೊಮೆಟೋ ಅತೀಯಾಗಿ ಬೆಳೆದಿದ್ದು ರೈತರ ಪಾಲಿಗೆ ಬೆಲೆಯಿಲ್ಲದಂತೆ ಮಾಡಿದೆ. ಹೂಡಿದ ಹಣವೂ ಮರಳಿ ಬಾರದಂಥ ಆರ್ಥಿಕ ಸಂಕಷ್ಟದ ್ನ್ಥತಿಯಲ್ಲಿ ರೈತರಿದ್ದಾರೆ. ಅಷ್ಟೇ ಅಲ್ಲ ಮಧ್ಯವರ್ತಿಗಳ ಹಾವಳಿ, ಖರೀದಿದಾರರ ನಿರಾಸಕ್ತಿಯಿಂದಾಗಿ ತರಕಾರಿ ಕೇಳುವವರಿಲ್ಲದೇ ರೈತರ ಹೊಲದಲ್ಲಿಯೇ ಕೊಳೆಯುವ ್ನ್ಥತಿ ನಿರ್ಮಾಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement