ಉಪಗ್ರಹ ಆಧಾರಿತ ಸಂವಾದ
ಗುರುಮಠಕಲ್: ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ, ಸೋಮವಾರ ಬೆಳಿಗ್ಗೆ ಕಾಲೇಜಿನ ಎಲ್ಲ ್ನಬ್ಬಂದಿ ಇಲಾಖೆಯ ವತಿಯಿಂದ ಜರುಗಿದ ಉಪಗ್ರಹ ಆಧಾರಿತ ಸಂವಾದದಲ್ಲಿ ಪಾಲ್ಗೊಂಡಿದ್ದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಬಿ ಜಿ. ನಂದಕುಮಾರ್ ಐಎಎಸ್ ನಿರ್ದೇಶಕ ಪ್ರೊ. ಭಾಗ್ಯಲಕ್ಮೀ ಮತ್ತು ಮಿಷನ್ ಆಡಳಿತಾಧಿಕಾರಿ ಎಚ್. ಬಸವರಾಜೇಂದ್ರ ಕೆಎಎಸ್ ಅವರು ಇತ್ತೀಚೆಗೆ ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣೆಗಳು ಮತ್ತು ಉನ್ನತ ಶಿಕ್ಷಣವನ್ನು ಗುಣಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿಸಲು ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರ್ನಿದರು. ಇಲಾಖೆಗೆ ಸಂಬಂಧ್ನಿದಂತೆ, ವಿವಿಧ ಕಾಲೇಜುಗಳಿಂದ ಕೇಳಲಾದ ಅನೇಕ ಸಮಸ್ಯೆ, ಸಂದೇಹಗಳಿಗೆ ಉತ್ತರಗಳನ್ನು ನೀಡಿದರು. ಇಲಾಖೆ ನಿರ್ದೇಶನದಂತೆ ಎಲ್ಲ ಯೋಜನೆಗಳ ಪರಿಣಾಮಕಾರಿ ಜಾರಿಗಾಗಿ ಶ್ರಮಿಸುವಂತೆ ಕಿವಿ ಮಾತು ಹೇಳಿದರು. ಉಪಗ್ರಹ ಆಧಾರಿತ ಸಂವಾದದಲ್ಲಿ ಕಾಲೇಜು ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ, ಅಧ್ಯಾಪಕರಾದ ಜಟ್ಟೆಪ್ಪ.ಬಿ, ದವಲಪ್ಪಾ, ಜೋಶಿ ಪ್ರಹ್ಲಾದ ಶರಣಬಸ್ಸಪ್ಪ ರಾಯಕೋಟಿ, ಭಾಗ್ಯಲಕ್ಷ್ಮಿ, ಡಾ. ಜಿ.ಆರ್. ಚಿಕ್ಮಠ ಯಲ್ಲಪ್ಪ, ನುಜಹತ ಪರವೀನ್ನ, ಬೋಧಕೇತರ ್ನಬ್ಬಂದಿ ್ನದ್ದಕಿ, ಗುಂಡೇರಾವ್, ಗುಂಡಪ್ಪ, ಪ್ರಭಾವತಿ ಇತರರು ಪಾಲ್ಗೊಂಡಿದ್ದರು.