ಕನ್ಯಾಕೋಳೂರಿಗೆ ಮಾದಾರ ಶ್ರೀಗಳ ಭೇಟಿ
ಶಹಾಪುರ: ಇತ್ತೀಚಿಗೆ ನಡೆದ ಗುಂಪು ಘರ್ಷಣೆಯಲ್ಲಿ ಹತ್ಯೆಗೊಳಪಟ್ಟ ದಲಿತ ಮುಖಂಡ ದೇವಿಂದ್ರಪ್ಪ ದಳಪತಿ ಅವರ ನಿವಾಸಕ್ಕೆ ಚಿತ್ರದುರ್ಗದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯಾ ಸ್ವಾಮೀಜಿ ಭೇಟಿ ನೀಡಿದರು.
ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು, ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ಕಾನೂನು ಮೀರಿ ವರ್ತ್ನಿದವರನ್ನು ಕಾನೂನು ಮೂಲಕವೇ ಮಟ್ಟ ಹಾಕುವ ಕೆಲಸವಾಗಬೇಕಿದೆ. ಅದಕ್ಕೆ ಸಮಾಜದ ಹಿರಿಯರು ಯುವಕರು ಸಹಕರಿಸಲಿದ್ದಾರೆ. ಕುಟುಂಬದ ಅಗತ್ಯತೆಗೆ ಸ್ಪಂದಿಸಲಿದ್ದಾರೆ.
ಸಮಾಜ ಬಾಂಧವರು ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಬೇಕು. ಮೃತನ ಮಕ್ಕಳಿಗೆ ಧೈರ್ಯ ತುಂಬಿದ ಸ್ವಾಮೀಜಿಯವರು, ಮಕ್ಕಳ ಮಾತು ಕೇಳಿ ಭಾವುಕರಾದರು. ಈ ಸಂದರ್ಭದಲ್ಲಿ ಹಲವರು ತಮ್ಮ ನೋವುಗಳನ್ನು ತೋಡಿಕೊಂಡರು. ಗ್ರಾಮದ ್ನ್ಥತಿಗತಿಗಳನ್ನು ತಿಳ್ನಿದರು. ಅಸಹಾಯಕತೆ ವ್ಯಕ್ತಪಡ್ನಿದ ಪೊಲೀಸರ ಬಗ್ಗೆ ಹಲವರು ದೂರು ನೀಡಿದರು.
ಈ ಬಗ್ಗೆ ಸಚಿವರ ಜೊತೆ ಚರ್ಚ್ನಿ ಸೂಕ್ತ ಕ್ರಮಕೈಗೊಳ್ಳಲು ತಿಳಿಸುವುದಾಗಿ ಹೇಳಿದರು. ಅಲ್ಲದೆ ಗ್ರಾಮದ ದಲಿತ ಕೇರಿ ಸುತ್ತು ಹಾಕಿ ಎಲ್ಲರಲ್ಲಿ ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸಮಾಜದ ರಾಜ್ಯ ಅಧ್ಯಕ್ಷ ಎಚ್. ಹಣಮಂತಪ್ಪ, ಮುಖಂಡರಾದ ದೇವಿಂದ್ರನಾಥ ನಾದ, ಶಾಂತಪ್ಪ ಕಟ್ಟಿಮನಿ, ವಾಸು ವಕೀಲರು, ಮಲ್ಲಪ್ಪ ಕಟ್ಟಿಮನಿ, ದೇವಿಂದ್ರ ಹೆಗ್ಗಡೆ, ಅಮರೇಶ ಬಿಲ್ಲವ್ ಇತರರು ಇದ್ದರು.