ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗದ್ದುಗೆ ಮಠ ಸದ್ಭಾವ ಗೋಷ್ಠಿ: ಶಾಸಕ ಪಾಟೀಲ್ ಮೆಚ್ಚುಗೆ

Mainashree
Updated On : 21 Jan 2014, 10:01 am

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.20
ಸರ್ಕಾರದ ಯಾವುದೇ ಅನುದಾನ ಬಯಸದೆ ಗದ್ದುಗೆ ಮಠ ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಶ್ಲಾಘ್ನಿದರು.
ಅವರು ಮಕ್ತಂಪೂರ ಬಡಾವಣೆಯಲ್ಲಿನ ಗದ್ದುಗೆ ಮಠದಲ್ಲಿ ಸದ್ಭಾವ ಗೋಷ್ಠಿಯ 46ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹ್ನಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ '್ನದ್ದರಾಮ ವಚನಗಳು' ಕೃತಿ ಲೋಕಾರ್ಪಣೆ ಮಾಡಿದ ಉದ್ಯಮಿ ಬಸವರಾಜ ಭೀಮಳ್ಳಿ  ಶರಣರ ಆದರ್ಶಗಳೇ ಇಂದು ದಾರಿದೀಪ ಎಂದರು.
ಗದ್ದುಗೆ ಮಠ 500 ವರ್ಷಗಳಿಂದ ಕ್ರಿಯಾಶೀಲವಾಗಿರುವ ಮಠ. ಪುರಾಣ-ಪ್ರವಚನ, ಸದ್ಭಾವಗೋಷ್ಠಿಗಳಿಂದಾಗಿ ಭಕ್ತರ ಮನೆ-ಮನಗಳಲ್ಲಿ ನೆಲೆ ನಿಂತಿದೆ ಎಂದು ರೇವಣ್ನದ್ದ ಸ್ವಾಮೀಜಿ ನುಡಿದರು.
ಗ್ರಂಥ ರಚನೆ, ಪ್ರಕಟಣೆ, ಅನ್ನ ದಾಸೋಹ ಮಠದ ಸಂಕಲ್ಪ ಎಂದರಲ್ಲದೆ ಭಕ್ತರ ಸಹಕಾರದಿಂದಾಗಿ ಮಠ ಉತ್ತರೋತ್ತರ ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದರು. 45 ವರ್ಷಗಳ ಸದ್ಭಾವ ಗೋಷ್ಠಿಗಳಲ್ಲಿ ಮಠದ ವತಿಯಿಂದ 42 ಕಿರು ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದರು.
ಬಳ್ಳಾರಿ ವಿರುಪಾಕ್ಷಪ್ಪ ದತ್ತಿನಿಧಿ ಉಪನ್ಯಾಸ ಮಾಲಿಕೆಯಲ್ಲಿ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಡಾ. ವಿ. ಜಿ. ಪೂಜಾರ ಅವರು  'ವಚನಗಳಲ್ಲಿ ಲೋಕ ವಿಡಂಬನೆ' ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ನೀಲಕಂಠಪ್ಪ ರಾಜಾಪುರ, ಬಸವರಾಜ ನಾಶಿ, ಮಹಾರಾಷ್ಟ್ರ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಪಿ. ವಿ.  ದೇಶಪಾಂಡೆ ಅವರಿಗೆ ಸನ್ಮಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement