ಪಟ್ಟಣದಲ್ಲಿ ನೆನಗುದಿಗೆ ಬಿದ್ದ ಕಾಮಗಾರಿಗಳು
ಶಹಾಪುರ: ಮುನ್ಸಿಪಾಲಟಿ ಆಡಳಿತ ಇಲ್ಲವೆಂದು ಸುಮ್ನೆ ಕುಳಿತರ ಹ್ಯಾಂಗರಿ, ಸಾಕಷ್ಟು ಕೆಲಸಗಳು ಬಾಕಿ ಉಳಿದಿದ್ದು, ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ಗುರುಪಾಟೀಲ ಶಿರವಾಳ ಪುರಸಭೆಯ ತಾಂತ್ರಿಕ ವಿಭಾಗದ ಎಂಜಿನೀಯರ್ ಅವರನ್ನು ತರಾಟೆಗೆ ತೆಗೆದುಕೊಡರು.
ಪಟ್ಟಣದ ಪುರಸಭೆಗೆ ಆಕ್ನ್ಮಕ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಸ್ತುತವಾಗಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಪರಿಶೀಲ್ನಿದ ಅವರು, ಏನೇ ಕೇಳಿದರೂ ಎ್ನಯವರು ಅನುಮತಿ ನೀಡುತ್ತಿಲ್ಲ ಎಂಬುದೊಂದೇ ಉತ್ತರ ಎಷ್ಟು ದಿವಸ ಹೇಳುತ್ತೀರಿ. ಉತ್ತಮವಾಗಿ ಕಾಮಗಾರಿ ನಿರ್ವಹ್ನಿದವರಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡಿಲ್ಲ. ಯಾರದ್ದೋ ಒತ್ತಡಕ್ಕೆ ಮಣಿದು ಅರೆಬರೆ ಪೈಪ್ಲೈನ್ ಮಾಡಿ, ಕಾಮಗಾರಿ ಅವ್ಯವಸ್ಥೆ ಮಾಡಿದವರಿಗೆ ಬಿಲ್ ಕೊಡುತ್ತೀರಿ. ನೀರು ನಿರ್ವಹಣೆ ಅಸಮರ್ಪಕವಾಗಿದೆ. ಹಲವಾರು ಬಡಾವಣೆಗಳಲ್ಲಿ ಚರಂಡಿಗಳ ್ನ್ಥತಿ ಹದಗೆಟ್ಟಿದೆ. ಪಟ್ಟಣದ ಮುಖ್ಯರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿವೆ. ವಿದ್ಯುತ್ ವ್ಯವಸ್ಥೆ ಖರ್ಚು ಹಾಕುವುದು ನಡೆದಿದೆಯೇ ವಿನಹ ಒಂದು ಬಡಾವಣೆಗಳಲ್ಲಿ ಕಂಬಗಳಿಗೆ ವಿದ್ಯುತ್ ಸೌಕರ್ಯವಿಲ್ಲ. ಇದಕ್ಕೆಲ್ಲ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯತೆ ಕಾರಣವಾಗೆದೆ. ಏನೇ ಕೇಳಿದರೂ ಅದಕ್ಕೊಂದು ನಕಾರಾತ್ಮಕ ಉತ್ತರ ಕೊಡುವುದೊಂದೇ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡ್ನಿದರು.
ಡ್ನಿ ಬಳಿಗೆ ನಿಯೋಗ: ಪುರಸಭೆಗೆ ಸಂಬಂಧ್ನಿದಂತೆ ಯಾವ ಯೋಜನೆಗಳು ಅನುಮೋದನೆಯಾಗಬೇಕು. ಯಾವ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಬಾಕಿ ಇರುವ ಬಿಲ್ಲುಗಳು, ಕಾರ್ಮಿಕರ ಸಮಸ್ಯೆ ಇನ್ನಿತರ ಯಾವುದೇ ಪ್ರಸ್ತಾವನೆಗಳಿರಲಿ, ಎಲ್ಲವನ್ನೂ ಸಜ್ಜುಗೊಳ್ನಿ ನಿಯೋಗದೊಂದಿಗೆ ಬನ್ನಿ. ಜಿಲ್ಲಾಧಿಕಾರಿಗಳ ಜೊತೆ ಮಾತನಾಡೋಣ. ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಅಡತಡೆಯಾಗಬಾರದು ಎಂದು ಸೂಚನೆ ನೀಡಿದರು.
ಹೊಸ ಯೋಜನೆ ತಯಾರ್ನಿ: ತರಕಾರಿ ಮಾರುಕಟ್ಟೆಗೆ ಈಗಾಗಲೇ ಇರುವ ಶೆಡ್ಡುಗಳಲ್ಲಿ ಕೆಲವು ಬಳಕೆಯಾಗುತ್ತಿದ್ದು, ಇನ್ನು ಕೆಲವು ಶೆಡ್ಗಳು ಹಲವಾರು ಕಾರಣಗಳಿಂದ ಬಳಕೆಯಾಗದೇ ಉಳಿದಿವೆ. ಸದ್ಯ ಉಪಯೋಗಕ್ಕೆ ಬಾರದ ್ನ್ಥತಿ ನಿರ್ಮಾಣವಾಗಿದ್ದು, ಪುರಸಭೆ ತಾಂತ್ರಿಕ ವಿಭಾಗದವರು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಹೊಸ ಯೋಜನೆಯೊಂದನ್ನು ್ನದ್ಧಪಡ್ನಿ ಸರ್ಕಾರಕ್ಕೆ ಕಳುಹಿಸಬೇಕು. ಬೆಲೆ ಬಾಳುವ ಸ್ಥಳಗಳು ಉಪಯೋಗಕ್ಕೆ ಬರುವಂತಾಗಬೇಕು. ಇದರಿಂದ ಪುರಸಭೆಯ ಆರ್ಥಿಕ ಬಲವರ್ಧನೆಗೂ ಸಹಕಾರಿಯಾಗುತ್ತದೆ ಎಂದು ತಿಳ್ನಿದರು.
ಕಾರ್ಮಿಕರ ಹಣ ಸಂದಾಯವಾಗಲಿ: ಪಟ್ಟಣದಲ್ಲಿ ನೈರ್ಮಲ್ಯೀಕರಣ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕೊಡುವ ಗೌರವ ಸಂಭಾವನೆಯಲ್ಲಿ ಕಮಿಶನ್ ಹೊಡೆಯುವ ಕೆಲಸ ಆಗಬಾರದು. ಅವರು ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ್ನಗಬೇಕು. ಈ ಕುರಿತು ನೈರ್ಮಲ್ಯ ನಿರೀಕ್ಷಕರು ಹೆಚ್ಚು ಕಾಳಜಿ ವಹ್ನಿ, ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ತಿಂಗಳಿಗೆ ್ನಗುವ ಗೌರವ ಧನ ದೊರಕ್ನಿಕೊಡಬೇಕು. ಸರ್ಕಾರದ ಸಾರ್ವಜನಿಕ ಯೋಜನೆಗಳನ್ನು ಸರ್ವರಿಗೂ ತಲುಪಿಸುವುದರ ಜೊತೆ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಅಡತಡೆಯಾಗದಂತೆ ಪುರಸಭೆಯವರು ಕಾರ್ಯ ಪ್ರವೃತ್ತರಾಗಬೇಕೆಂದು ತಿಳ್ನಿದರು.
ಈ ಸಂದರ್ಭದಲ್ಲಿ ಬಸವರಾಜ ಆನೇಗುಂದಿ, ದೇವಿಂದ್ರಪ್ಪ ತೋಟಿಗೇರ ಇತರರು ಇದ್ದರು.