ಯೋಗದಿಂದ ರೋಗಮುಕ್ತ ಮಾಡುವ ಸಂಕಲ್ಪ: ಸ್ವಾಮೀಜಿ
ಗುಲ್ಬರ್ಗ: ಆಧುನಿಕ ಜೀವನ ಶೈಲಿಯಿಂದ ರೋಗಗಳು ಹೆಚ್ಚಾಗಿ ಮಾನವರನ್ನು ಕಾಡುತ್ತಿವೆ. ಔಷಧಿಗಿಂತ ಯೋಗದಲ್ಲೇ ರೋಗಗಳಿಗೆ ಪರಿಹಾರವಿದೆ. ಬದುಕಿನ ಶೈಲಿ ಬದಲಾವಣೆ ಮಾಡಿಕೊಂಡು ಮುಂದುವರಿದಲ್ಲಿ ರೋಗ ಹತ್ತಿರ ಸುಳಿಯದು ಎಂದಿರುವ ಶ್ವಾಸಗುರು ವಚನಾನಂದ ಸ್ವಾಮೀಜಿ ಕರ್ನಾಟಕವನ್ನು ಯೋಗಯುಕ್ತ- ರೋಗಮುಕ್ತಗೊಳಿಸುವ ಸಂಕಲ್ಪದೊಂದಿಗೆ ಬರುವ ದಿನಗಳಲ್ಲಿ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುತ್ತದೆ ಎಂದು ಹೇಳಿದರು. ಗುಲ್ಬರ್ಗದಲ್ಲಿ ಜ.20ರಿಂದ 7 ದಿನಗಳ ಕಾಲ ಸಂಘಟಿಸಲಾಗಿರುವ ಯೋಗ ಶಿಬಿರ ನಡ್ನೆಕೊಡಲು ಗುಲ್ಬರ್ಗಕ್ಕೆ ಆಗಮ್ನಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಶ್ರಮವಿಲ್ಲದ ದುಡಿಮೆಗಳಿಂದಾಗಿ ರೋಗಗಳು ಕಾಡುತ್ತಿವೆ. ಯೋಗದಲ್ಲಿ ಎಲ್ಲದಕ್ಕೂ ಮದ್ದಿದೆ. ಯೋಗದಿಂದ ರೋಗಮುಕ್ತರಾಗಬಹುದು ಎಂಬುದರ ಕಲೆ ಹೇಳಿಕೊಡುವುದೇ ಅಭಿಯಾನದ ಮೂಲ ಗುರಿ ಎಂದರು.
ಗುಲ್ಬರ್ಗದಲ್ಲಿ ಯೋಗ ಶಿಬಿರಕ್ಕೆ ಬರುವವರು ಬೆಳಗ್ಗೆ ಆಹಾರ ತಿನ್ನದೆ ಬರಬೇಕು. ಜೊತೆಗೆ ಬೆಡ್ಶೀಟ್ ತರಬೇಕೆಂದು ಸಂಘಟಕ ಮಲ್ಲಿಕಾರ್ಜುನ ಗರೂರ್ ತಿಳ್ನಿದ್ದಾರೆ. ಅಧ್ಯಾತ್ಮಿಕ ಪ್ರವಚನ ಸಮಿತಿ, ವಿಕಾಸ ಅಕಾಡೆಮಿ ಸಂಯುಕ್ತವಾಗಿ ಈ ಯೋಗ ಶಿಬಿರ ಆಯೋಜ್ನಿವೆ.