ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಲಿತ ಮುಖಂಡನ ಹತ್ಯೆ: ಪ್ರತಿಭಟನೆ

Mainashree
Updated On : 22 Jan 2014, 11:02 am

ಚಿಂಚೋಳಿ: ಶಹಾಪುರ ತಾಲೂಕಿನ ಕನ್ಯಾಕೋಳೂರ ಗ್ರಾಮದಲ್ಲಿ ದಲಿತ ಮುಖಂಡನ ಹತ್ಯೆ ಖಂಡಿಸಿ ತಾಲೂಕ ಡಿಎಸ್‌ಎಸ್ (ಅಂಬೇಡ್ಕರ್ ವಾದ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚಿಂಚೋಳಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರ ಗ್ರಾಮದ ದಲಿತ ಮುಖಂಡನ ಹತ್ಯೆಯನ್ನು ಖಂಡಿಸಿ ತಾಲೂಕ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಪ್ರತಿಭಟನೆ ನಡೆಸಿ ತಾಲೂಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರ ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರೆಯ ಪ್ರಯುಕ್ತ ದಲಿತರು ಗ್ರಾಮದ ಜಾತ್ರೆಯ ಸ್ವಾಗತ ಬ್ಯಾನರ್ ಕಟ್ಟಿರುವುದನ್ನು ಸಹಿಸದ ಕೆಲವು ಕೋಮುವಾದಿ ಶಕ್ತಿಗಳು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ. ದೇವೇಂದ್ರಪ್ಪಾ ದಳಪತಿಯನ್ನು ಅಮಾನುಷವಾಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದನ್ನು ಸಮಿತಿ ಅಧ್ಯಕ್ಷ ಗೋಪಾಲ ರಾಂಪೂರೆ ಆಕ್ರೋಶ ವ್ಯಕ್ತಪಡಿಸಿ ಘಟನೆಯಲ್ಲಿ ಮೃತಪಟ್ಟ ದಲಿತ ಮುಖಂಡನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದಲಿತ ಮುಖಂಡನಿಗೆ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು, ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ಸರ್ಕಾರಿ ನೌಕರಿ ನೀಡಬೇಕು. ಘಟನೆಯಲ್ಲಿ ಗಾಯಗೊಂಡ ದಲಿತರಿಗೆ ಮತ್ತು ಪೊಲೀಸರಿಗೆ ಪರಿಹಾರ ಧನ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಮೋಹನ ಜೋಶಿ ಅವರಿಗೆ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ಸಲ್ಲಿಸಿದರು.
ಗೌತಮ್, ಗೋಪಾಲ ರಾಂಪೂರೆ, ಪಾಂಡುರಂಗ ಲೊಡನೊರ್, ಓಮನರಾವ ಕೊರವಿ, ಪ್ರದೀಪ ಮೇತ್ರಿ, ರಾಜಶೇಖರ ಹೊಸಮನಿ, ನಿಯಾಜ ಅಲಿ, ಶಿವಕುಮಾರ ಸೇರಿಕಾರ, ಜಗದೇವ ಗೌತಮ, ಆನಂದ ಟೈಗರ್, ದೀಲಿಪಕುಮಾರ ಬೊಮ್ಮನಳ್ಳಿ, ಹಸನಪ್ಪಾ ಮೇತ್ರಿ, ರೇವಣಸಿದ್ದಪ್ಪಾ ಹೊಡೆಬೀರನಳ್ಳಿ, ಸೋಮಶೇಖರ ಬೆಡಕಪಳ್ಳಿ ಶಶಿಕುಮಾರ ಮೇತ್ರಿ, ಬಾಬುರಾವ ಬುಗಡಿ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದರು. ಚಿಂಚೋಳಿ ಪಿಎಸೈ ಶಿವಶಂಕರ ಸಾಹು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement