ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಟ್ಟಣದಾದ್ಯಂತ ಸಂಮ್ರಮದ ದಿನಾಚರಣೆ

Mainashree
Updated On : 22 Jan 2014, 11:10 am

ಹುಣಸಗಿ: ಪಟ್ಟಣ ಸೇರಿದಂತೆ ವಜ್ಜಲ್, ಬಲಶೆಟ್ಟಿಹಾಳ, ಮಾಳನೂರ, ದ್ಯಾಮನಹಾಳ, ಕಲ್ಲದೇವನಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಅಂಬಿಗರ ಚೌಡಯ್ಯ ಜಯಂತಿಯನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.
ಹುಣಸಗಿಯ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ ಹಾಗೂ ಹಿರಿಯ ಪತ್ರಕರ್ತ ವೆಂಕಟಗಿರಿ ದೇಶಪಾಂಡೆ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಅಂಬಿಗರ ಚೌಡಯ್ಯ ವೃತ್ತದಲ್ಲಿ ಪೂಜೆ ಸಲ್ಲಿಸಲಾಯಿತು. ಮಲ್ಲಣ್ಣ ಡಂಗಿ, ಶಿವಣ್ಣ ಡಂಗಿ ಮಾತನಾಡಿದರು. ಜೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿ ವಿ. ಶ್ರೀನಿವಾಸ ಪ್ರಸಾದ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ವಜ್ಜಲ್ ವರದಿ: ಗ್ರಾಪಂ.ನಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಮುಖಂಡ ರಾಜಶೇಖರಗೌಡ ಪಾಟೀಲ ಮಾತನಾಡಿದರು. ಸಂಗಣ್ಣ ಕಾಮನಟಗಿ, ಪರಮಣ್ಣ ಬಾಕ್ಲಿ, ಸದಸ್ಯರಾದ ಶಿವಲಿಂಗಪ್ಪ ಭಜನಿ, ಶಿವಪ್ಪಹರಿಜನ, ಮುಖಂಡರಾದ ವಿರುಪಾಕ್ಷಿ ಬಾಗೇವಾಡಿ, ತಮ್ಮನಗೌಡ ಪಾಟೀಲ, ಜಕ್ಕಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ದೇವಪುರ ಜೆ: ಗ್ರಾಮದಲ್ಲಿ ನಡೆದ ಜಯಂತಿಯಲ್ಲಿ ನಿಂಗನಗೌಡ ದಳಪತಿ, ಯಲ್ಲಪ್ಪ ಮೇಸ್ತಾಕ, ಮಲ್ಲು ಬಾಕ್ಲಿ, ನಾಗಣ್ಣ ಹೆಬ್ಬಾಳ, ಬಸಣ್ಣ ಬಾಕ್ಲಿ, ಮಲ್ಲಿಕಾರ್ಜುನ ನಾಗರಾಳ, ಆನಂದ ಹೊಸಗೌಡ್ರ ಸೇರಿದಂತೆ ಇತರರು ಇದ್ದರು. ಮುದನೂರು ಕಂಠಿಮಠದ ಮಲ್ಲಿಕಾರ್ಜುನ ಶ್ರೀ ಚೌಡಯ್ಯ ವೃತ್ತದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement