ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾತು ಬದಲಿಸಿದ ಸಿಎಂ: ಎಬಿವಿಪಿ

Mainashree
Updated On : 22 Jan 2014, 11:00 am

ಐಜಿಪಿ ವರ್ಗಾವಣೆ ಮಾತನ್ನಾಡಿದ್ದ ಸಿಎಂ ಸಿದ್ದರಾಮಯ್ಯ 1 ದಿನದಲ್ಲೇ ತಮ್ಮ ನಿಲುವಿನಿಂದ ಹಿಂದೆ ಸರಿದರು ಯಾಕೆ ಎಂದು ಪ್ರಶ್ನಿಸಿ ಗುಲ್ಬರ್ಗದಲ್ಲಿ ಎಬಿವಿಪಿ ಮಂಗಳವಾರ ಹೋರಾಟ ನಡೆಸಿತು. ಸಿಎಂ ಈ ನಿಲುವನ್ನು ಖಂಡಿಸಿರುವ ಎಬಿವಿಪಿ ಐಜಿಪಿ ವರ್ಗದ ಆದೇಶ ಹೊರಬಿದ್ದಿಲ್ಲ ಎಂದು ಗೊಂದಲಕಾರಿ ಹೇಳಿಕೆ ನೀಡಿದ್ದಾರೆ. ಗುಲ್ಬರ್ಗ ಶೂಟೌಟ್ ಪ್ರಕರಣ ಮುಚ್ಚಿಹಾಕುವ ಹುನ್ನಾರದ ಅಂಗವಾಗಿ ಇಂತಹ ಗೊಂದಲ ಸೃಷ್ಟಿ ಸಾಗಿದಂತಿದೆ ಎಂದು ಎಬಿವಿಪಿ ಆತಂಕ ಹೊರಹಾಕಿದೆ. ಇನ್ನಾದರೂ ಸಿಎಂ ಸಿದ್ದರಾಮಯ್ಯ ಐಜಿಪಿ ವಜೀರ್ ಅಹ್ಮದ್ ಅವರನ್ನು ವರ್ಗ ಮಾಡಬೇಕು. ತನಿಖೆ ಸಿಒಡಿಗೆ ಒಪ್ಪಿಸಬೇಕು, ಅಲ್ಪಸಂಖ್ಯಾತರ ಮತ ಪಡೆಯುವ ಉದ್ದೇಶದಿಂದ ಹೇಳಿರುವ ಮಾತನ್ನೆ ತಿರುವು ಮುರುವಾಗಿಸುವುದು ಅದೆಷ್ಟು ಸರಿ ಎಂದು ಎಬಿವಿಪಿ ಸಿಎಂರನ್ನು ಪ್ರಶ್ನಿಸಿದೆ. ಮುಖಂಡರಾದ ಭಾಗಣ್ಣ, ಕಾರ್ಯಕರ್ತರು ಹೇಳಿಕೆ ನೀಡಿದ್ದು, ಐಜಿಪಿ ವರ್ಗಾವಣೆ ಆಗದೆ ಹೋದಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement