ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೂಟೌಟ್ ಪ್ರಕರಣ: ಐಜಿಪಿ ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ

Mainashree
Updated On : 22 Jan 2014, 11:00 am

ಕ.ಪ್ರ. ವಾರ್ತೆ  ಗುಲ್ಬರ್ಗ  ಜ.21
ಶೂಟೌಟ್ ಪ್ರಕರಣದಲ್ಲಿ ಐಜಿಪಿ ವಜೀರ್ ಅಹ್ಮದ್ ತಾವು ಉನ್ನತ ಪೊಲೀಸ್ ಅಧಿಕಾರಿ ಎಂಬ ಸಂಗತಿ ಮರೆತಂತೆ ರಾಜಕಾರಣಿಗಳನ್ನು ಮೀರಿಸುವಂತಹ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಶ್ರೀರಾಮ ಸೇನೆ ರಾಜ್ಯ ಮುಖಂಡರು, ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮಿಗಳು ಯಾರನ್ನು ಮೆಚ್ಚಿಸಲು ಇಂತಹ ಹೇಳಿಕೆ ಐಜಿಪಿ ನೀಡುತ್ತಿದ್ದಾರೆಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಸಿದ್ದಲಿಂಗ ಶ್ರೀ ಈ ಕೆಳಗಿನ ಪ್ರಮುಖ ಸಂಗತಿಗಳನ್ನು ಪತ್ರದಲ್ಲಿ ಪ್ರಸ್ತಾಪಿಸುತ್ತ ಐಜಿಪಿ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
1) ಮುನ್ನಾ ರೌಡಿ ಹಿಡಿಯಲು ಬಂಡೆ ಬರಿಗೈಯಲ್ಲಿ ಹೋಗಿದ್ದೇ ತಪ್ಪು, ಮುನ್ನಾ ಪಾತಕಿ ಎಂಬುದೇ ತಮಗೆ ಗೊತ್ತಿಲ್ಲ, ಇದೆಲ್ಲ ಎಸ್ಪಿ ಹಂತದ ಅಧಿಕಾರಿ ಜವಾಬ್ದಾರಿಗೆ ಬಿಟ್ಟಂತಹ ವಿಚಾರ ಎಂದು ಹೇಳುತ್ತಿರುವ ಐಜಿಪಿಗೆ ತಮ್ಮ ವಲಯ ವ್ಯಾಪ್ತಿಯಲ್ಲಿ ಮುಂಬೈನಿಂದ ಗಡಿಪಾರಾಗಿ ಬಂದ ಪಾತಕಿ ಇರುವ ವಿಚಾರ ಗೊತ್ತಿಲ್ಲ ಎಂದರೆ ಇವರ ಪೊಲೀಸ್ ಬೇಹುಗಾರಿಕೆ ಅದೆಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿದೆ ಎಂಬುದನ್ನು ಯಾರಾದರೂ ಊಹಿಸಬಹುದಾಗಿದೆ.
2) ತಮ್ಮ ಪತಿಗೆ ಐಜಿಪಿ ಕಿರುಕುಳ ನೀಡುತ್ತಿದ್ದರು ಎಂದು ಬಂಡೆ ಪತ್ನಿ ಮಲ್ಲಮ್ಮ ನೇರವಾಗಿಯೇ ಹೇಳಿದ್ದಾರೆ. ಅದೇ ಸಂಗತಿ ಮಾಧ್ಯಮಗಳಿಗೂ ತಿಳಿಸಿದ್ದಾರೆ. ಅನ್ಯರ ಮಾತು ಕೇಳಿ ದುಃಖದಲ್ಲಿರುವ ಮಲ್ಲಮ್ಮ ಸಂಚಿನ ಮಾತುಗಳನ್ನು ಆಡಲು ಸಾಧ್ಯವೇ? ಐಜಿಪಿಯವರು ತಮ್ಮ ಹೇಳಿಕೆಯಲ್ಲಿ ತಮ್ಮ ವಿರುದ್ಧ ಆಗದವರು ಸಂಚು ಮಾಡುತ್ತಿದ್ದಾರೆಂದು ಹೇಳಿಕೆ ನೀಡಿದ್ದು, ಇದು ಯಾರನ್ನು ಮೂರ್ಖರನ್ನಾಗಿಸುವ ತಂತ್ರ ಬಂಡೆ ಪತ್ನಿ ವಿರುದ್ಧವೂ ಐಜಿಪಿ ಆರೋಪ ಮಾಡಿದ್ದು ತಪ್ಪು.
3) ಬಂಡೆ ಹುತಾತ್ಮರಾದಾಗ ಬಿದಿಗಿಳಿದು ವ್ಯವಸ್ಥೆ ವಿರುದ್ಧ ಹೋರಾಟ ಮಾಡದ ಮುಸ್ಲಿಂ ಸಂಘಟನೆಗಳು ಐಜಿಪಿ ವಜೀರ್ ಎತ್ತಂಗಡಿ ಹೇಳಿಕೆ ಪತ್ರಿಕೆಗಳಲ್ಲಿ ಬರುತ್ತಿದ್ದಂತೆಯೇ ಬೀದಿಗಿಳಿದಿದ್ದು, ಆ ಸಮುದಾಯದ ಯಾವ ಧೋರಣೆ ಹೊರಹಾಕುತ್ತದೆ.
4) ಯಾವ ಹೋರಾಟಗಳಿಗೂ ಮಣಿಯದೆ, ಬೆಂಡಾಗದೆ ಸರ್ಕಾರ ತಕ್ಷಣ ಐಜಿಪಿ ವಜೀರ್ ಅಹ್ಮದ್‌ರನ್ನು ಗುಲ್ಬರ್ಗ ಕೇಂದ್ರವಾಗಿರುವ ಈಶಾನ್ಯ ವಲಯ ಐಜಿಪಿ ಹುದ್ದೆ ಜವಾಬ್ದಾರಿಯಿಂದ ಕೆಳಗಿಳಿಸಬೇಕು. ಇಲ್ಲದೆ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆಂದು ಸಿದ್ದಲಿಂಗ ಸ್ವಾಮೀಜಿ ಮನವಿ ಪತ್ರದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement