ಸಿಬಿಐ ತನಿಖೆಗೆ ರಂಭಾಪುರಿಶ್ರೀ ಆಗ್ರಹ
ಗುಲ್ಬರ್ಗ: ಶೂಟೌಟ್ ಪ್ರಕರಣದ ಸಮಗ್ರ ತನಿಖೆಯಾಗಬೇಕು, ಸಿಎಂ ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ ಸರಿಯಾಗಿಲ್ಲ, ದೇಶಭಕ್ತ ಪಿಎಸ್ಐ ಗುಂಡೇಟಿಗೆ ಬಲಿಯಾದಾಗ ಅವರೇ ಖುದ್ದು ಬಂದು ಕುಟುಂಬಕ್ಕೆ ಸಾಂತ್ವನ ಹೇಳಬೇಕಿತ್ತು. ಇಲ್ಲಿ ಅದ್ಯಾವುದು ನಡೆದಿಲ್ಲ. ಸರ್ಕಾರದ ಕ್ರಮ ಸರ್ವರ್ಥ ಸರಿಯಲ್ಲ ಎಂದು ರಂಭಾಪುರಿ ಶ್ರೀ ಹೇಳಿದ್ದಾರೆ.
ಮಂಗಳವಾರ ಗುಲ್ಬರ್ಗಕ್ಕೆ ಭೇಟಿ ನೀಡಿ ಹುತಾತ್ಮ ಬಂಡೆ ನಿವಾಸಕ್ಕೆ ತೆರಳಿ ಬಂಡೆ ಅವರ ತಂದೆ ಕರಿಬಸಪ್ಪ ಹಾಗೂ ಪತ್ನಿ ಮಲ್ಲಮ್ಮರಿಗೆ ಸಾಂತ್ವನ ಹೇಳಿದರು. ಪರಿಹಾರ ನೀಡುವಲ್ಲಿಯೂ ಮೀನಮೇಷ ಸಾಗಿದೆ. ದುಃಖದಲ್ಲಿರುವ ಬಂಡೆ ಕುಟುಂಬಕ್ಕೆ ಸರ್ಕಾರ ಆಸರೆಯಾಗಿ ನಿಲ್ಲಬೇಕೇ ಹೊರತು ಹೀಗೆ ದ್ವಂದ್ವ ನಡೆ ಸರಿಯಲ್ಲ ಎಂದು ಶ್ರೀಗಳು ಹೇಳಿದರು. ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಸಮಗ್ರ ತಮನಿಖೆಗೆ ಸಿಬಿಐ ವಿಚಾರಣೆಯೇ ನಡೆಯಬೇಕು. ಸರ್ಕಾರ ಈ ಪ್ರಕರಣ ವಿಚಾರಣೆಗೆ ಒಪ್ಪಿಸದೆ ಹೋದಲ್ಲಿ ಹೋರಾಟದ ದಾರಿ ಹಿಡುಯುವುದು ಅನಿವಾರ್ಯ. ಮಠಾಧೀಶರುಗಳ ನಿಯೋಗ ಸಿಎಂ ಅವರಿಗೆ ಭೇಟಿ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತದೆ ಎಂದರು.