ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭವನ ನಿರ್ಮಾಣಕ್ಕೆ ಭೂಮಿ, ಹಣ

Mainashree
Updated On : 23 Jan 2014, 11:48 am

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜ.22
ನಿಜಶರಣ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ 2 ಎಕರೆ ಭೂಮಿ ಹಾಗೂ 1 ಕೋಟಿ ಅನುದಾನ ನೀಡುವ ಭರವಸೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಮಲ್ಲೇಶ ತಂಗಾ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ವಿವಿಧ ಸಮಾಜದ ಭವನಗಳಿಗೆ ಸರ್ಕಾರ ಅನುದಾನ ನೀಡಿದ್ದು, ಈ ಸಮಾಜವು ತೀರ ಹಿಂದುಳಿದಿದ್ದರಿಂದ ಭವನ ನಿರ್ಮಾಣಕ್ಕೆ ಅನುದಾನ ನೀಡಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಆದರ್ಶ ಮಾನವ: ನಂತರ ಮಾತನಾಡಿದ ಮಲ್ಲಿಕಾರ್ಜುನ ಎಮ್ಮೆನೂರ, ನಿಜಶರಣರು ಸಮಾಜದ ಅಂಕು ಡೊಂಕುಗಳನ್ನು ತನ್ನ ನೇರ ನಡೆ- ನುಡಿಗಳಿಂದ ವಚನ ರೂಪ ನೀಡಿ ಇತರರಿಗೆ ಮಾರ್ಗದರ್ಶನ ತೋರಿದ ಅಂಬಿಗರ ಚೌಡಯ್ಯ ಒಬ್ಬ ಆದರ್ಶ ಮಾನವ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಅಗಮಿಸಿದ ಉಪನ್ಯಾಸಕ ಬಿ. ಅರಕೇರಿ, ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ತನ್ನದೇ ಅದ ಶೈಲಿಯನ್ನು ಅಳವಡಿಸಿಕೊಂಡು ಸಾಮಾನ್ಯ ವಿಷಯಗಳ ಬಗೆಗೆ ಹಾಗೂ ಸಮಾಜದಲ್ಲಿನ ಕೆಡುಕುಗಳ ಬಗೆಗೆ ಜನರನ್ನು ಎಚ್ಚರಿಸುವಂತಹ ಕೆಲಸವನ್ನು ಮಾಡಿದ್ದರು.
ದಿಟ್ಟ ಮಾನವತಾವಾದಿ: ಅಲ್ಲದೆ, ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ನಡೆಸಬೇಕೆಂಬ ಅಂಶವನ್ನು ತಮ್ಮ ಸರಳ, ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತುನಿಷ್ಠತೆ, ಸತ್ಯ ಬದುಕು ನಿಜವಾದದ್ದು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತಾವಾದಿ ಎಂದರು.
ಬಸವರಾಜ ಚಿನ್ನಮಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಾಣ್ಣ ಸಾಲಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ತಾಪಂ ಅಧ್ಯಕ್ಷ ಶರಣಬಸಪ್ಪ ಪಾಟೀಲ್ ಭಾಗೋಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಶ್ರೀಮಂತ ಹೊಸಮನಿ ತಾಲೂಕು ಕೋಲಿ ಸಮಾಜ ಅಧ್ಯಕ್ಷ ದೇವಿಂದ್ರಪ್ಪ ತಳವಾರ, ತಮ್ಮಣ್ಣ ಡಿಗ್ಗಿ, ಶರಣಪ್ಪ ಹೋಸೂರ, ಶಿವಮಂದ್ರಪ್ಪ ಸಣ್ಣೂರಕರ, ದಶರಥ ದೊಡ್ಮನಿ, ಅಣ್ಣಾರಾವ ಸಣ್ಣೂರ, ಸಿದ್ದಣ್ಣ ಜಮಾದಾರ, ಚಂದ್ರು ಕಾಳಗಿ, ದೇವಿಂದ್ರ ಅಣಕಲ್, ಸಾಬಣ್ಣ ದೊಡ್ಮನಿ, ಮಹೇಶ ಜಾಯಿ, ವಿಜಯಕುಮಾರ ಲೊಡ್ಡನೋರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement