26ರಂದು ಸಂಗೀತ ಬಳಗದ ದಶಮಾನೋತ್ಸವ
ಗುಲ್ಬರ್ಗ: ಸಂಗೀತ ಬಳಗ ಜ.26ರಂದು ಸಂಜೆ ತನ್ನ ದಶಮಾನೋತ್ಸವ ಸಂಭ್ರಮವನ್ನು ಖ್ಯಾತನಾಮ ಗಾಯಕರನ್ನು ಆಹ್ವಾನಿಸಿ, ಪ್ರತಿಭೆಗಳನ್ನು ಸತ್ಕರಿಸಿ ಆಚರಿಸಲು ಮುಂದಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುಬ್ರಾವ ಕುಲಕರ್ಣಿ ಮಾತನಾಡಿ, ಜ.26ರಂದು ಸಂಜೆ ಎನ್ವಿ ಸಭಾ ಭವನದಲ್ಲಿ ಹೆರೂರ್ ರಂಗ ಮಂದಿರದಲ್ಲಿ ನಡೆಯಲಿದೆ. ಸಂಗೀತ ಸಮಾರಂಭದಲ್ಲಿ ಪ್ರಸಾದ ಖೋರ್ಪಡೆ ಅವರೊಂದಿಗೆ ಶ್ರೀಧರ ಮಾಂಡ್ರೆ ತಬಲಾ, ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಸ್ಥಳೀಯ ಸಂಗೀತ ಸಾಧಕರು ಸಹ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ದಶಮಾನೋತ್ಸವ ಸಂಭ್ರಮ ಹಾಗೂ ವಾರ್ಷಿಕ ಸಂಗೀತ ಸಮ್ಮೇಳನದಲ್ಲಿ ಮಾಜಿ ಸಚಿವ ರೇವುನಾಯಕ ಬೆಳಮಗಿ, ವೆಂಕಟೇಶ ಅಯೋಮೋಟಿವ್ಸ್ ಮಾಲೀಕರಾದ ಕೃಷ್ಣಾಜಿ ಕುಲಕರ್ಣಿ, ವಾಮನರಾವ ಸಾಂಬ್ರಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.