ಅಗಡಿ ನೇತ್ರದಾನ ಘೋಷಣೆ
ಹುಮನಾಬಾದ್: ಶಿಕ್ಷಣ ಸೇವೆ ಮಾಡುತ್ತಿರುವುದು ನನಗೆ ತೃಪ್ತಿ ತಂದಿದ್ದು, ದೇಹತ್ಯಾಗದ ನಂತರ ಎರಡು ಕಣ್ಣುಗಳು ದಾನ ಮಾಡಲಾಗುವುದು ಎಂದು ಶಿಕ್ಷಣ ಪ್ರೇಮಿ ವಿರುಪಾಕ್ಪಪ್ಪಾ ಅಗಡಿ ತಿಳಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಗುರುವಾರ ಬಸವತೀರ್ಥ ವಿದ್ಯಾಪೀಠ ವತಿಯಿಂದ ಆಯೋಜಿಸಲ್ಪಟ್ಟ 25 ವರ್ಷ ಶಿಕ್ಷಣ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸದ ಪ್ರಯುಕ್ತ ಸತ್ಕಾರ ಸ್ವೀಕರಿಸಿ, ಶಿಕ್ಷಣವು ಮಾನವನ ಪರಿವರ್ತನೆಯ ಹೆಜ್ಜೆಯಾಗಿದೆ ಎಂದರು.
25 ವರ್ಷಗಳಿಂದ ಶರಣರ ನೀಡಿರುವ ಸಂದೇಶಗಳನ್ನು ಮೈಗೂಡಿಸಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜಿಲ್ಲೆಯ ವಿವಿಧೆಡೆ ಶಿಕ್ಷಣ ಸಂಸ್ಥೆಗಳು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದರು.
ಬಸವತೀರ್ಥ ವಿದ್ಯಾಪೀಠದ ಅಂಗ ಸಂಸ್ಥೆಗಳ ಪ್ರಮುಖರು, ವಕೀಲರ ಸಂಘ, ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳು ಪ್ರಮುಖರು ವಿರುಪಾಕ್ಷಪ್ಪಾ ಅಗಡಿ ದಂಪತಿಯನ್ನು ಸತ್ಕರಿಸಿದರು.
ಡಾ. ಬಸವಲಿಂಗ ಪಟ್ಟದೇವರು, ರೇಣುಕಾ ಗಂಗಾಧರ ಶಿವಾಚಾರ್ಯ, ಹೈ-ಕ ಹೋರಾಟ ಸಮಿತಿ ಅಧ್ಯಕ್ಷ ವೈಜಿನಾಥ ಪಾಟೀಲ್, ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ವೀರಣ್ಣಾ ಪಾಟೀಲ್, ಕೇಶವರಾವ್ ತಳಘಟಕರ್, ಅರವಿಂದ ಭಾಲ್ಕಿಕರ್ ಇದ್ದರು.