ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಸಮಾಜ ಪರಿವರ್ತನೆಯಲ್ಲಿ ಮಠಗಳ ಪಾತ್ರ ಹಿರಿದು'

Mainashree
Updated On : 24 Jan 2014, 11:37 am

ಶಹಾಬಾದ್: ಸಮಾಜದ ಸಾವಿರಾರು ಮಠಗಳು ಹಾಗೂ ಮಠಾಧೀಶರು ಕನ್ನಡ ನಾಡಿನಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬದಲಾವಣೆ ಮಾಡುವುದರಲ್ಲಿ ಮಠಗಳ ಪಾತ್ರ ಹಿರಿದು. ಅಂತಹ ಮಠಗಳಲ್ಲಿ ಸಾಮಾಜಿಕವಾಗಿ ಪರಿವರ್ತನೆ ಮಾಡಿದ ಈ ಭಾಗದ ಮಠವೆಂದರೆ ಮುಗುಳನಾಗಾವಿ ಮಠ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಮುಗುಳನಾಗಾವಿಯ ಸಿದ್ಧಲಿಂಗ ಸ್ವಾಮಿಗಳ ಪಟ್ಟಾಧಿಕಾರ ರಜತ ಮಹೋತ್ಸವದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ಮಠಗಳು ಅನ್ನದಾಸೋಹ, ಜ್ಞಾನ ದಾಸೋಹ ನೀಡುತ್ತ ಬಂದಿರುವುದನ್ನು ಇಂದಿನ ಮಠಗಳು ಮುಂದುವರಿಸಿಕೊಂಡು ಬರುತ್ತಿವೆ. ಕಲ್ಯಾಣ ನಾಡು, ಕಾಯಕ ನಾಡು, ಸಮಾನತೆಯ ನಾಡಿನಲ್ಲಿ ಬಸವಾದಿ ಶರಣರು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದರು ಎಂದು ಹೇಳಿದರು.
ಮುಂಡರಗಿಯ ಜಗದ್ಗುರು ಡಾ. ಅನ್ನದಾನೇಶ್ವರ ಶಿವಯೋಗಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಮುಗುಳನಾಗಾವಿಯ ಸಿದ್ಧಲಿಂಗ ಸ್ವಾಮಿ, ಸುಲಫಲ ಮಠಾ ಡಾ. ಮಹಾಂತ ಶಿವಾಚಾರ್ಯ, ಚೌಡಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಉದ್ಯಮಿ ಸತೀಶ ಗುತ್ತೆದಾರ, ಶಶಿಕಾಂತ ಪಾಟೀಲ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement