ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುಲ್ಬರ್ಗ ಶೂಟೌಟ್: ಸಿಐಡಿ ತನಿಖೆ ಆರಂಭ

Rashmi Kasaragodu
Updated On : 25 Jan 2014, 1:32 am

ಗುಲ್ಬರ್ಗ: ನಗರದಲ್ಲಿ ಜ.8 ರಂದು ಕಂಡ ಶೂಟೌಟ್ ಪ್ರಕರಣದ ಸಿಐಡಿ ತನಿಖೆ ಆರಂಭವಾಗಿದೆ. ಈ ಗುಂಡಿನ ಕಾಳಗದಲ್ಲಿ ಭೂಗತ ಪಾತಕಿ ಮುನ್ನಾ ಮೃತಪಟ್ಟಿದ್ದರೆ, ತೀವ್ರ ಗಾಯಗೊಂಡಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರೂ ಹುತಾತ್ಮರಾಗಿದ್ದರು.
ಸಿಐಡಿ ಡಿಐಜಿ ಸೌಮೆಂದೋ ಮುಖರ್ಜಿ ನೇತೃತ್ವದ ತಂಡ ಗುಲ್ಬರ್ಗಕ್ಕೆ ಆಗಮಿಸಿದ್ದು, ವಿಚಾರಣೆ ಆರಂಭಿಸಿದೆ. ಶೂಟೌಟ್ ನಡೆದ ಛದೋಡಿ ದೇವಡಿಗಲ್ಲಿ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಸಿಐಡಿ ತಂಡ ಈ ಠಾಣೆಗೆ ಭೇಟಿ ನೀಡಿ ಸುದೀರ್ಘ ವಿಚಾರಣೆ ನಡೆಸಿದೆ. ಇದಲ್ಲದೆ ಹುತಾತ್ಮಾ ಬಂಡೆ ಅವರ ಪತ್ನಿಯನ್ನೂ ಭೇಟಿ ಮಾಡಿ ಅವರಿಂದಲೂ ಹೇಳಿಕೆಗಳನ್ನು ತಂಡ ಪಡೆದಿದೆ ಎಂದು ಮೂಲಗಳು ಹೇಳಿವೆ. ಇದಲ್ಲದೆ ಬಂಡೆ ಕೆಲಸ ಮಾಡುತ್ತಿದ್ದ ಸ್ಟೇಷನ್ ಬಜಾರ್ ಠಾಣೆಗೂ ಮುಖರ್ಜಿ ನೇತೃತ್ವದ ಸಿಐಡಿ ತಂಡ ಭೇಟಿ ನೀಡಿ ಅಲ್ಲಿಯೂ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement