ಸಂಸಾರವೆಂಬುದೊಂದು ಗಾಳಿಯ ಸೊಡರು
ಶಹಾಪುರ: ಬಸವ ಚಳವಳಿ ಜಾಗತಿಕ ಮಟ್ಟದಲ್ಲಿ ಒಂದು ಅಭೂತಪೂರ್ವ ಹೋರಾಟವಾಗಿದೆ. ಬಸವಣ್ಣನವರು ಎಲ್ಲರಲ್ಲಿಯೂ ಕಾಯಕ ಪ್ರಜ್ಞೆ ಹುಟ್ಟುಹಾಕಿ ಹುಸಿ ಪ್ರತಿಷ್ಠೆಗಳನ್ನು ಅಳಿಸಿಹಾಕಿದರು. ಮಾನವೀಯತೆ ಮರೆತು ಭ್ರಾಂತಿಯ ಲೋಕದಲ್ಲಿ ಓಲಾಡುತ್ತಿದ್ದ ಮನಸ್ಸನ್ನು ವಾಸ್ತವ ಪ್ರಜ್ಞೆಗೆ ತಂದುಕೊಟ್ಟು ಅವರೆಲ್ಲರಲ್ಲಿ ಮನುಷ್ಯತ್ವವನ್ನು ತುಂಬಿದರು. ಸಂಸಾರವೆಂಬುದೊಂದು ಗಾಳಿಯ ಸೊಡರು ಎಂಬುದು ಮನದಟ್ಟಾಗಬೇಕಾದಲ್ಲಿ ಶರಣರ ಅನುಭಾವದ ಅಮೃತವೇ ಪ್ರಮುಖ ಎಂಬ ಅರಿವನ್ನು ಮೂಡಿಸಿದರು ಎಂದು ಸಿಂಧನೂರಿನ ಬಸವ ತತ್ವ ಅನುಭಾವಿ ಶಿವಣ್ಣ ಸಣ್ಣೆಪ್ಪನವರ್ ಬಣ್ಣಿಸಿದರು.
ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು-27ರ ಸಭೆಯಲ್ಲಿ ಶರಣ ದೇವರ ದಾಸಿಮಯ್ಯನ ಜಯಂತ್ಯುತ್ಸವದ ಅಂಗವಾಗಿ 'ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ' ಎಂಬ ವಿಷಯ ಕುರಿತು ಅವರು ಮಾತನಾಡಿದರು. ಬಸವಣ್ಣನವರ ಹಿರಿಯ ಸಮಕಾಲೀಕನ ಶರಣ ದಾಸಿಮಯ್ಯ ಹಾಗೂ ಪತ್ನಿ ದುಗ್ಗಳೆ ಆದರ್ಶ ಸತಿಪತಿಗಳಾಗಿದ್ದರು. ಶರಣರ ಬದುಕು ಹಾಗೂ ಬೋಧನೆಗಳು ನುಡಿ ಸಿದ್ಧಾಂತಗಳಲ್ಲ, ನಡೆ ಸಿದ್ಧಾಂತಗಳಾಗಿವೆ. Ú”ÑÚMÑÛÁÚÈæM¶ß¥ÚæàM¥Úß ಗಾಳಿಯ ಸೊಡರು. ಸಿರಿಯೆಂಬುದೊಂದು ÑÚM}æ’ ಇದ್ದಂತೆ ಎಂಬುದನ್ನು ಶರಣರು ಜನತೆಗೆ ಮನದಟ್ಟು ಮಾಡಿಕೊಟ್ಟರು ಎಂದರು.
ಪುಸ್ತಕ ಬಿಡುಗಡೆ: ಕನ್ನಡ ನಾಡು ಕಂಡ ಅಪೂರ್ವ ಹೋರಾಟಗಾರ, ಬರಹಗಾರ ಡಾ.ಪಾಪು ಅವರ ಬದುಕು ಎಲ್ಲರಿಗೂ ಅನುಕರಣೀಯ. ಅವರೊಂದು ಜೀವಂತ ತಂತಿ. ನಾವೆಲ್ಲ, ನ್ಯಾಯ ನಿಷ್ಠುರಿ ಡಾ. ಪಾಪು ಅವರ ಸಮಕಾಲೀನರು ಎಂಬುದೇ ಹೆಮ್ಮೆಯ ವಿಷಯ ಎಂದು ಶಿವರಂಜನ್ ಸತ್ಯಂಪೇಟೆ ಬರೆದ ನಾಡೋಜ ಪಾಟೀಲ ಪುಟ್ಟಪ್ಪ ಕೃತಿ ಬಿಡುಗಡೆಗೊಳಿಸಿ ಸಾಹೇಬಗೌಡ ಬಿರಾದಾರ ಹೇಳಿದರು.
ಶರಣರನ್ನು ಬಸವಣ್ಣನವರಿಂದ ಬೇರ್ಪಡಿಸುವ ಹುನ್ನಾರ ಖಂಡನೀಯ. 12 ಶತಮಾನದ ಚಳವಳಿಯಲ್ಲಿ ಎಲ್ಲಾ ಶರಣರು ಒಂದೇ ಬಳ್ಳಿಯ ಹೂಗಳಾಗಿದ್ದರು. ಶರಣರು ಹಾಗೂ ಅವರು ಬರೆದ ವಚನಗಳನ್ನು ಬಿಡಿಬಿಡಿಯಾಗಿ ನೋಡದೆ ಇಡಿಯಾಗಿ ನೋಡಿದರೆ ಅವರ ವಿಚಾರಗಳು ಅರ್ಥವಾಗುತ್ತವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಶರಣರ ವಿಚಾರಗಳನ್ನು ಹಾಸಿ ಹೊದ್ದುಕೊಂಡು ಜೀವಿಸಿದರೆ ಸುಖ, ಶಾಂತಿ, ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆಂದು ಸಭೆಯನ್ನು ಉದ್ಘಾಟಿಸಿದ ಉಪನ್ಯಾಸಕ ಬಿ.ಎಂ.ಪೂಜಾರ ನುಡಿದರು.
ಬಸವ ಮಾರ್ಗ ಪ್ರತಿಷ್ಠಾನದ ವತಿಯಿಂದ ಸಂಗಣ್ಣ ಆನೇಗುಂದಿಯವರನ್ನು ಸನ್ಮಾನಿಸಲಾಯಿತು. ಶಂಕ್ರಪ್ಪ ಗಾರಿಗಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಹಾರಣಗೇರಿ, ಚೆನ್ನಪ್ಪ ಗುಂಡಾನೋರ, ಸಂಗಣ್ಣ ಗುಳಗಿ, ಗುರಣ್ಣ ಮದರಿ ಮುಂತಾದವರು ಭಾಗವಹಿಸಿದ್ದರು.