ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಏವೂರು ವಿಎಸ್ಸೆಸ್ಸೆನ್‌ನಲ್ಲಿ ಅವ್ಯವಹಾರ

Vishwanath S
Updated On : 29 Jan 2014, 11:22 am

ಕ.ಪ್ರ.ವಾರ್ತೆ , ಗುಲ್ಬರ್ಗ , ಜ. 28
ಸುರಪುರ ತಾಲೂಕಿನ ಏವೂರ ಗ್ರಾಮದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಬೆಳೆವಿಮೆ ಮೊತ್ತ 6, 72, 818 ಲಕ್ಷ ಸಂಘದ ಅಧ್ಯಕ್ಷ, ಕಾರ್ಯದರ್ಶಿಗಳು ಸೇರಿಕೊಂಡು ಸ್ವಂತಕ್ಕೆ ಬಳಸಿ ಅವ್ಯವಹಾರ ಎಸಗಿರುವ ಪ್ರಕರಣದ ವಿಚಾರಣೆ ಮುಂದುವರಿದಿದೆ. ಸದರಿ ಪ್ರಕರಣದಲ್ಲಿ ಕಾರ್ಯದರ್ಶಿಯಿಂದ 4.50 ಲಕ್ಷ, ಅಧ್ಯಕ್ಷರಿಂದ 1.52 ಲಕ್ಷ ವಸೂಲಿ ಮಾಡಿ ಸಂಘದ ಉಳಿತಾಯ ಖಾತೆಯಲ್ಲಿ ಜಮಾ ಮಾಡಲಾಗಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ಹೇಳಿದ್ದಾರೆ.
ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಅವರ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮಹಾದೇವ ಪ್ರಸಾದ್ ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಯಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳ ಪೈಕಿ ಏವೂರು ಸಂಘ ಹೊರತುಪಡಿಸಿ ಉಳಿದ ಯಾವ ಸಂಘಗಳಲ್ಲಿಯೂ ಇಂತಹ ಅವ್ಯವಹಾರ ನಡೆದ ದೂರುಗಳು ಬಂದಿಲ್ಲ ಎಂದು ಹೇಳಿದ್ದಾರೆ.
ಆಡಳಿತ ಮಂಡಳಿಗೆ ಸೂಚನೆ: ಏವೂರು ಸಂಘದ ಅಧ್ಯಕ್ಷ, ಕಾರ್ಯದರ್ಶಿಗಳು ಬೆಳೆವಿಮೆ ಹಣ ರೈತರಿಗೆ ವಿತರಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆಂಬ ದೂರು ಇಲಾಖೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಯ್ತು. ಇದರಿಂದ ಅವ್ಯವಹಾರ ಬೆಳಕಿಗೆ ಬಂದಿದ್ದು ವಿಚಾರಣೆ ಸಾಗಿದೆ. ಹಣ ಬಳಸಿಕೊಂಡವರಿಂದ ಅದನ್ನು ವಾಪಸ್ ಪಡೆಯಲಾಗಿದೆ. ಈ ಪ್ರಕರಣದಲ್ಲಿ ತಪ್ಪು ಮಾಡಿರುವ ಸಂಘದ ಅಧ್ಯಕ್ಷ, ಮಾಜಿ ಕಾರ್ಯದರ್ಶಿಗಳ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.
ಸಹಕಾರ ಸಂಘಗಳ ಅಧಿನಿಯಮ 1959ರ 29ಸಿ ಅಡಿಯಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳ ವಿರುದ್ಧ ಪ್ರಕರಣ ಹೂಡಲಾಗಿದೆ. ಈಗಿರುವ ಏವೂರ್ ವಿಎಸ್ಸೆಸ್ಸೆನ್ ಆಡಳಿತ ಮಂಡಳಿಗೆ ಹಣ ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸದರಿ ಪ್ರಕರಣದ ಪರಿವೀಕ್ಷಣಾ ವರದಿ ಸ್ವೀಕರಿಸಿದ ನಂತರ ಸಂಬಂಧಿತ ರೈತರಿಗೆ ಬಾಕಿ ಇರುವ ಬೆಳೆವಿಮೆ ಹಣ ವಿತರಿಸಲಾಗುತ್ತದೆ ಎಂದು ಸಚಿವ ಮಹಾದೇವ ಪ್ರಸಾದ್ ಅಲ್ಲಂಪ್ರಭು ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಕ್ಫ್ ಮಂಡಳಿಯಲ್ಲಿ 107 ಸಿಬ್ಬಂದಿ ಹೊರಗುತ್ತಿಗೆ: ರಾಜ್ಯ ವಕ್ಫ್ ಮಂಡಳಿಯಲ್ಲಿ 84 ಸಿಬ್ಬಂದಿ ಖಾಯಂ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ 107 ಸಿಬ್ಬಂದಿ ಹೊರಗುತ್ತಿಗೆಯಲ್ಲಿದ್ದಾರೆ. ಈ ಪೈಕಿ ಇಬ್ಹರು ಹೊರರಾಜ್ಯದವರಾಗಿದ್ದರೆ 189 ಸಿಬ್ಬಂದಿ ಕರ್ನಾಟಕದವರೇ ಇದ್ದು ಕೆಲಸ ನಿರ್ವಹಿಸುತ್ತಿದ್ದಾರೆಂದು ವಕ್ಫ್ ಖಾತೆ ಸಚಿವ ಖಮರುಲ್ ಇಸ್ಲಾಂ ಅವರು ಎಂಎಲ್ಸಿ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ತೋಟಗಾರಿಕೆ ಮಿಷನ್: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಗುಲ್ಬರ್ಗದಲ್ಲಿ 2005ರಲ್ಲಿ, ಯಾದಗಿರಿಯಲ್ಲಿ 2010 ರಲ್ಲಿ ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ ಈ ಯೋಜನೆಯಡಿ ಗುಲ್ಬರ್ಗಕ್ಕೆ ಲಭ್ಯವಾದಂತಹ ಅನುದಾನ 319. 83 ಲಕ್ಷ, ಈ ಪೈಕಿ 229.85 ಲಕ್ಷ ವೆಚ್ಚವಾಗಿದೆ. ಯಾದಗಿರಿ ಜಿಲ್ಲೆಯ ಅನುದಾನ ಮೊತ್ತ 440. 08 ಲಕ್ಷ, ಈ ಪೈಕಿ 266.35 ಲಕ್ಷ ಅನುದಾನ ವೆಚ್ಚವಾಗಿದೆ ಎಂದು ಎಂಎಲ್ಸಿ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ತೋಟಗಾರಿಕೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ಬಿಜಾಪುರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾಮಗಾರಿಗಳ ನೋಟ: 2013- 14ನೇ ಸಾಲಿನಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ ಕೈಗೊಂಡಿರುವ ಹೆದ್ದಾರಿ ಕಾಮಗಾರಿಗಳ ಮಾಹಿತಿ ಬಗ್ಗೆ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಕೇಳಿರುವ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಡಾ. ಮಹಾದೇವಪ್ಪ ಉತ್ತರಿಸಿದ್ದು ಮಾಹಿತಿ ಹೀಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement