ಗರ್ಭಗುಡಿಯಿಂದ ಹೊರಗೆ ವಿಗ್ರಹ: ಆತಂಕದ ವಾತಾವರಣ
ಹುಣಸಗಿ: ಸಮೀಪದ ಅಗ್ನಿ ಗ್ರಾಮದಲ್ಲಿ ಪುರಾತನ ಕಾಲದ 10 ರಿಂದ 11 ನೇ ಶತಮಾನದ ಜೈನ ಬಸದಿಯೊಂದು ಇದ್ದು ಗ್ರಾಮಸ್ಥರು ಇದನ್ನು “f«ÚVÚßt’ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿನ ವಿಗ್ರಹವನ್ನು ಗರ್ಭಗುಡಿಯಿಂದ ಹೊರಗಡೆ ತಂದಿಡಲಾಗಿದೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಅಗ್ನಿ ಗ್ರಾಮದ ಕೆಲವರು ಗ್ರಾಮಸ್ಥರ ಒಪ್ಪಿಗೆ ಮೇರೆಗೆ ಹಗಲು ಸಮಯದಲ್ಲಿ ವಿಗ್ರಹವನ್ನು ಹೊರಗೆ ತರುವ ಪ್ರಯತ್ನ ಮಾಡಿದ್ದಾರೆ. ಈ ವಿಗ್ರಹ ಅಂದಾಜು 6 ಅಡಿ ಎತ್ತರ, 4 ಅಡಿ ಅಗಲವಿದ್ದು, ಸುಮಾರು 6 ರಿಂದ 8 ಕ್ವಿಂಟಲ್ ತೂಕ ಹೊಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಕೆಂಭಾವಿ ಪಿಎಸ್ಐ ಸುನಿಲ್ ಮೂಲಿಮನಿ, ಬಸದಿಯ ವಿಗ್ರಹವನ್ನು ಹಗಲಿನಲ್ಲಿಯೇ ಕಳವು ಮಾಡುತ್ತಿದ್ದಾರೆಂದು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಿದ್ದೇನೆ. ಗ್ರಾಮದ ಕೆಲವು ಹಿರಿಯರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ತಾವೇ ನಿರ್ಣಯ ಮಾಡಿ ವಿಗ್ರಹವನ್ನು ಹೊರಗೆ ತೆಗೆದಿದ್ದಾರೆ. ಗ್ರಾಮದ ಕೆಲವರು ಪುರಾತನ ಕಾಲದ ಈ ದೇವಸ್ಥಾನವನ್ನು ನೀವೇಕೆ ಜೀರ್ಣೋದ್ಧಾರ ಮಾಡುತ್ತಿರೀ? ಇದಕ್ಕಾಗಿಯೇ ಪ್ರಾಚ್ಯವಸ್ತು ಇಲಾಖೆ ಇದ್ದು, ಜಿಲ್ಲಾಡಳಿತ ಗಮನ ನೀಡುತ್ತದೆ. ಒಂದು ವೇಳೆ ನೀವೇ ದೇವಸ್ಥಾನದ ಜೀರ್ಣೋದ್ಧಾರ ಮಾಡಿದರೆ ಇದರ ಇತಿಹಾಸ, ವಿಗ್ರಹಗಳು ಮೂರ್ತಿಗಳು, ಹೊರ ಮೈ ಕೆತ್ತನೆಗಳು ವಿರೂಪಗೊಳ್ಳುತ್ತವೆ ಎಂದು ವಾದ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ದೂರು ದಾಖಲಾಗಿಲ್ಲವಾದರೂ, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಾವಲನ್ನು ÔÛOÚÅÛW¥æ’ ಎಂದು ತಿಳಿಸಿದರು.
ಜೈನ ಪರಂಪರೆಯ ದೇವಾಲಯಗಳು: ಕೆಂಭಾವಿ, ಹುಣಸಗಿ, ಮುದನೂರು, ಅರಕೇರಾ (ಜೆ.), ಅಗ್ನಿ, ಹಗರಟಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಸಂದರ್ಭದಲ್ಲಿ ಈ ಭಾಗದಲ್ಲಿ ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಇತ್ತು ಎಂದು ಕೇಳಿ ಬಂದಿದೆ.
ಪ್ರಾಚ್ಯವಸ್ತು ಸಂಶೋಧಕರ ಅಭಿಪ್ರಾಯ: ಪ್ರಾಚ್ಯವಸ್ತು ಸಂಶೋಧಕರು ಹಾಗೂ ಜೈನ ಸಮಾಜದ ಯಾದಗಿರಿ ಹಾಗೂ ಗುಲ್ಬರ್ಗ ಜಿಲ್ಲೆಗಳ ಅಧ್ಯಕ್ಷರಾದ ಡಿ. ಎನ್. ಅಕ್ಕಿ ಅವರು ಪತ್ರಿಕೆಯೊಂದಿಗೆ ಮಾತನಾಡಿ, 1994 ರಲ್ಲಿ ನಾನು ಅಗ್ನಿ ಗ್ರಾಮಕ್ಕೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಜೈನ ದೇವಾಲಯದ ಪ್ರತಿ ಅಂಗುಲವನ್ನೂ ಪರಿಶೀಲನೆ ಮಾಡಿದ್ದೆ. ಅಲ್ಲಿರುವ ಗರ್ಭಗುಡಿಯ ವಿಗ್ರಹವು ನೇಮಿನಾಥ ತೀರ್ಥಂಕರರದ್ದಾಗಿರಬಹುದು ಎಂದು ಊಹೆ ಮಾಡಲಾಗಿತ್ತು. ಅಲ್ಲಿ ಎರಡು ಚಿಕ್ಕ ಮೂರ್ತಿಗಳು ಇದ್ದು, ಅವುಗಳನ್ನು ಯಕ್ಷ-ಯಕ್ಷಿಣಿಯದಾಗಿವೆ. ಈ ವಿಗ್ರಹಗಳನ್ನು ಬೆರಳಿನಿಂದ ತಟ್ಟಿದರೆ ಪಂಚ ಲೋಹದ ನಾದ ಕೇಳಿ ಬರುತ್ತದೆ. ಇದೇ ರೀತಿಯ ವಿಗ್ರಹಗಳು ಹಂಪಿಯಲ್ಲಿ ಕಂಡು ಬರುತ್ತವೆ. ದೇವಸ್ಥಾನದ ವಿನ್ಯಾಸ, ಗರ್ಭಗುಡಿ, ಅಂತರಾಳ, ನವರಂಗ, ಮುಖಮಂಟಪ ಇದೇ ರೀತಿಯಲ್ಲಿವೆ. ಇತ್ತೀಚಿನ ದಿನಗಳಲ್ಲಿ ಪ್ರಾಚ್ಯ ವಸ್ತು ಇಲಾಖೆಗೆ ಹೆಚ್ಚಿನ ಅನುದಾನ, ಪ್ರೋತ್ಸಾಹ ದೊರೆಯದೇ ಇರುವುದರಿಂದ ಇಂತಹ ಅಪರೂಪದ ಶಿಲಾ ಶಾಸನಗಳು, ಮಂದಿರಗಳಿಗೆ ಹಾನಿಯಾಗುತ್ತಿದೆ ಎಂದು ವಿಷಾದಿಸಿದರು.
ಬಹು ವರ್ಷಗಳ ಹಿಂದೆ ಚಿತ್ತಾಪುರ ತಾಲ್ಲೂಕಿನ ಅಲ್ಲೂರು ಗ್ರಾಮದಲ್ಲಿಯೂ ಇಂತಹದ್ದೇ ಜೈನ ಬಸದಿಯ ಮೂರ್ತಿಯನ್ನು ಒಡೆದು ಹಾಕಿದ್ದಾಗ ಬಹುದೊಡ್ಡ ಹೋರಾಟ ನಡೆದಿದ್ದನ್ನು ಅವರು ಮೆಲುಕು ಹಾಕಿದರು.
ಹುಣಸಗಿ ಸಿಪಿಐ ವಿಜಯ ಮುರುಗುಂಡಿ ಪತ್ರಿಕೆಯೊಂದಿಗೆ ಮಾತನಾಡಿ, ಮೂರ್ತಿ ಭಿನ್ನಗೊಂಡಿರುವುದರಿಂದ ಅದನ್ನು ಜೀರ್ಣೋದ್ಧಾರ ಮಾಡಲು ಗ್ರಾಮದ ಕೆಲ ಹಿರಿಯರು ಸಿದ್ದರಾಗಿದ್ದರು. ಕೆಲವರು ಪೊಲೀಸರಿಗೆ ಈ ಮಾಹಿತಿ ನೀಡಿ ಗೊಂದಲ ಉಂಟು ಮಾಡಿದ್ದಾರೆ ಎಂದರು. ಸಧ್ಯ ಅಲ್ಲಿ ಪೊಲೀಸ್ ಕಾವಲನ್ನು ಹಾಕಲಾಗಿದೆ ಎಂದು ತಿಳಿಸಿದರು.
ಭೇಟಿಗೆ ಅಧಿಕಾರಿಗಳ ನಿರಾಸಕ್ತಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಗ್ರಾಮಕ್ಕೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ, ಯಾದಗಿರಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರರಾಗಲಿ ಯಾರೂ ಭೇಟಿ ನೀಡಿಲ್ಲ ಎಂದು ತಿಳಿದು ಬಂದಿದೆ.