ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮನುಷ್ಯ ಕರ್ಮದಿಂದ ಮಾತ್ರ ಮಹಾನ್ ಆಗುತ್ತಾನೆ

Vishwanath S
Updated On : 29 Jan 2014, 11:23 am

ಚಿಂಚೋಳಿ:  ಮನುಷ್ಯ ಹುಟ್ಟಿನಿಂದ ಭಾಗ್ಯವಂತ. ಆದರೆ  ಕರ್ಮದಿಂದ ಮಾತ್ರ ಮಹಾನ್ ಆಗುತ್ತಾನೆ. ಕರ್ಮದಿಂದ ಮುಂದೆ ಬರಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಾಧೀಶ ಮೋಹನ್.ಎಂ. ಶಾಂತನಗೌಡ ಹೇಳಿದರು.
ಚಿಂಚೋಳಿ ಪಟ್ಟಣದ ನ್ಯಾಯಾಲಯ ಅವರಣದಲ್ಲಿ ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ) ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯದ ಹಾಗೂ ನ್ಯಾಯಾಧೀಶರ ವಸತಿ ಗೃಹದ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ನ್ಯಾಯಾಂಗ, ಗುಲ್ಬರ್ಗ ನ್ಯಾಯವಾದಿಗಳ ಸಂಘ ಚಿಂಚೋಳಿ ಹಾಗೂ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಈ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ವಕೀಲರಲ್ಲಿ ಪರಿಶ್ರಮ ಕಷ್ಟಸಹಿಷ್ಣು ಭಾವನೆ ಮತ್ತು ಸಹನೆ ಇರಬೇಕು. ನಾನು ಎಂಬ ಅಹಂ ಇರಬಾರದು. ವಕೀಲರು ಸುತ್ತಿ ಬಳಸಿ ವಾದ ಮಾಡದೇ ನೇರವಾಗಿ ವಾದ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಬೀದರ ಸಂಸದ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಾತನಾಡಿ, ಹಿಂದುಳಿದ ಭಾಗದ ಜನರಿಗೆ ಹೈಕೋರ್ಟ್ ಪೀಠದಿಂದ ಅನುಕೂಲವಾಗಿದೆ.  ವಕೀಲರು ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಹಿರಿಯ ನ್ಯಾಯವಾದಿ ಚಂದ್ರರಾವ ದೇಶಮುಖ ವಕೀಲರ ಸಂಘದ ಪರವಾಗಿ ನ್ಯಾಯಮೂತಿಗಳಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ನ್ಯಾಯಾಧೀಶರಾದ ಕೆ.ಎಮ್. ಶೈನಿ. ಜಿ.ವಿ.ತುರಮುರಿ, ಮಾನವೇಂದ್ರರೆಡ್ಡಿ ದೇಗಲಮಡಿ, ಕಾಶಿನಾಥ ಮೋತಕಪಳ್ಳಿ, ತಾಲೂಕ ವಕೀಲರ ಸಂಘದ ಅಧ್ಯಕ್ಷ ಶಿವರಾಯ ಹಾದಿಮನಿ, ಉಪಾಧ್ಯಕ್ಷ ರಾಜೇಂದ್ರ ವರ್ಮಾ, ಲೋಇ ಎಇಇ ಅಶೋಕ ಮಹೇಂದ್ರಕರ್, ಬಿ.ಎಸ್.ಮಾಲಿ ಬಿರಾದಾರ ಇಇ ಸೇಡಂ, ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement