ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನ

Lingaraj Badiger
Updated On : 30 Jan 2014, 10:56 am

ಸೈದಾಪುರ: ಇಲ್ಲಿಗೆ ಸಮೀಪದ ಅಜಲಾಪುರ ಸರ್ಕಾರಿ ಪ್ರೌಢಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕಣ್ಣನ್ ಹಾಗೂ ಬಿ.ಆರ್.ಸಿ ಶಂಕರಲಿಂಗಪ್ಪ, ಹೇಮಂತ ಇವರುಗಳನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಣ್ಣನ್ ಚಿತ್ರಕಲಾ ಪ್ರದರ್ಶನ ಅವಲೋಕಿಸಿ ಮಾತನಾಡುತ್ತಾ,  ಗಡಿ ಪ್ರದೇಶದ ಮಕ್ಕಳ ಈ  ಚಿತ್ರಕಲೆ ಅಪರೂಪದ್ದಾಗಿದೆ. ಇಲ್ಲಿನ ಮಕ್ಕಳು ರಚಿಸಿದ ವಿವಿಧ ಮಾಧ್ಯಮದ ಕಲಾಕೃತಿಗಳು ವಿಶೇಷತೆಯನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟರು.
  ಚಿತ್ರಕಲೆಯ ಜತೆಯಲ್ಲಿ ಇತರೆ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಬೇಕೆಂದು ಹಾರೈಸಿದರು. ಈ ವೇಳೆ ಮುಖ್ಯಗುರು ನರಸಿಂಹಪ್ಪ, ಚಿತ್ರಕಲಾ ಶಿಕ್ಷಕ ಎಸ್. ಎಸ್. ಗಡ್ಡಿ, ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಹಾಗೂ ಶಾಲಾಮಕ್ಕಳು ಉಪಸ್ಥಿತರಿದ್ದರು.

ಮಾಜಿ ದೇವದಾಸಿಯರ ಆರೋಗ್ಯ ತಪಾಸಣೆ
ಯಾದಗಿರಿ:  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ, ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ದೇವದಾಸಿಯರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ಟಿ. ತಳವಾರ ಉದ್ಘಾಟಿಸಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಅವರು  ದೇವದಾಸಿ ಪದ್ಧತಿ ಸಮಾಜಕ್ಕೆ ಒಂದು ಕಳಂಕವಾಗಿದೆ. ಈ ಕಳಂಕದಿಂದ ಮುಕ್ತರಾಗಬೇಕೆಂದರಲ್ಲಿ ಈ ಅನಿಷ್ಠ ಪದ್ಧತಿಯನ್ನು ತಡಗಟ್ಟುತ್ತೇವೆಂದು  ಎಲ್ಲರೂ  ಪಣತೊಡಬೇಕು. ಸರ್ಕಾರದ ಜತೆಯಲ್ಲಿ ತಾವೂ ಕೈ ಜೋಡಿಸಬೇಕು ಎಂದು ಹೇಳಿದರು.
 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಜನರಾದ ಡಾ. ಭಗವಂತರಾವ ಅನಪೂರವರು,  ಸರ್ಕಾರ ನೀಡುತ್ತಿರುವ ಸೌಲಭಗಳನ್ನು ಪಡೆದುಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕಾದರೆ ತಾವು ಆರೋಗ್ಯದಿಂದ ಇರಬೇಕು. ತಮಗೆ ಇರುವ ಕಾಯಿಲೆಗಳ ಬಗ್ಗೆ ತಪಾಸಣೆ ಒಳಗಾಗಬೇಕು. ಕಾಯಿಲೆ ಸಣ್ಣ ಪ್ರಮಾಣದಲ್ಲಿ ಇದ್ದಾಗಲೇ ವೈದ್ಯರಿಂದ ಚಿಕಿತ್ಸೆ ಪಡೆಯಬೇಕೆಂದು ದೇವದಾಸಿಯರಿಗೆ ಕಿವಿಮಾತು ಹೇಳಿದರು. ಜಿಲ್ಲಾ  ಯೋಜನಾಧಿಕಾರಿಗಳಾದ ಎಸ್.ಎನ್.ಹಿರೇಮಠ ಯೋಜನೆಯ ಸಂಕ್ಷಿಪ್ತ ವಿವರಣೆ ನೀಡಿದರು. ಮೂರು ತಾಲೂಕುಗಳ, ಆಯ್ದ 220 ಮೇಲ್ಪಟ್ಟು ದೇವದಾಸಿಯರು ಶಿಬಿರದ ಲಾಭ ಪಡೆದರು.

ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಯಾದಗಿರಿ: ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಕಚೇರಿ ಕಾರ್ಯಾಲಯದಲ್ಲಿ ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು  ಖಾಲಿ ಇರುವ ಲೆಕ್ಕಿಗರು- ಕಂ- ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಕರೆಯಲಾಗಿದ್ದ ದಿನಾಂಕವನ್ನು ಫೆ.7 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮೊ. 9448911558 ಸಂಪರ್ಕಿಸಿ ಪಡೆಯಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement