ಗುಲ್ಬರ್ಗದ ಹಲ್ಲಿನ ದವಾಖಾನೆಗೆ ಉತ್ತಮ ಕ್ಲಿನಿಕ್- 2013 ಪುರಸ್ಕಾರ
ಗುಲ್ಬರ್ಗ: ಇಲ್ಲಿನ ಶ್ವೇತಾ ಹಲ್ಲಿನ ದವಾಖಾನೆ ಮುಂಬೈನ ಫ್ಯಾಮಡಂಟ್ ಪಬ್ಲಿಕೇಷನ್ಸ್ ನಡೆಸುವ ಜಾಗತಿಕ ಮಟ್ಟದ ದಂತವೈದ್ಯಕೀಯ ಸಮೀಕ್ಷೆಯಲ್ಲಿ ಅತ್ಯುತ್ತಮ ದಂತಾಸ್ಪತ್ರೆ ಎಂದು ಹೊರಹೊಮ್ಮಿದೆ.
ಸ್ಥಾಪನೆಯ ಒಂದೂವರೆ ವರ್ಷದಲ್ಲಿ ಈ ಆಸ್ಪತ್ರೆ ತನ್ನ ಉತ್ತಮ ಸೌಕರ್ಯಗಳೊಂದಿಗೆ ಮನೆಮಾತಾಗಿದೆ. ಜಾಗತಿಕ ಮಟ್ಟದಲ್ಲಿ ಏನೆಲ್ಲಾ ದಂತ ಚಿಕಿತ್ಸೆಗಳು ದೊರಕುತ್ತಿವೆಯೋ ಅವುಗಳನ್ನೆಲ್ಲ ಒಂದೇ ಸೂರಿನಡಿಯಲ್ಲಿ ಗುಲ್ಬರ್ಗ ಭಾಗದಲ್ಲಿ ದೊರಕಿಸಿಕೊಟ್ಟಿರುವ ಹಾಗೂ ಸಾಕಷ್ಟು ಜನ ಅವುಗಳನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಫ್ಯಾಮಡಂಟ್ ಸಂಸ್ಥೆ ಬೆಸ್ಟ್ ಕ್ಲಿನಿಕ್ ಪುರಸ್ಕಾರಕ್ಕೆ ಶ್ವೇತಾ ಡೆಂಟಲ್ ಕ್ಲಿನಿಕ್‌ಗೆ ಆಯ್ಕೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ತಿಳಿಸಿರುವ ಆಸ್ಪತ್ರೆ ಸಂಸ್ಥಾಪಕ ಡಾ. ಪ್ರಶಾಂತ ಪಾಟೀಲ್ ತಮ್ಮ ಆಸ್ಪತ್ರೆ ಸುಸಜ್ಜಿತವಾಗಿದೆ. ಆಧುನಿಕ ಯಂತ್ರೋಪಕರಣಗಳೊಂದಿಗೆ ಜನರ ಹಲ್ಲುನೋವು, ತೊಂದರೆಗಳನ್ನು ನಿವಾರಿಸುವ ಗುರಿ ತಮ್ಮದು ಎಂದರಲ್ಲದೆ ಜರ್ಮನ್, ಇಟಲಿಯಿಂದ ಉಪಕರಣಗಳನ್ನು ಆಮದು ಮಾಡಿಕೊಂಡು ಒಂದೇ ಕಡೆಯಲ್ಲಿ ಎಲ್ಲಾ ವಿಧದ ಸೂಪರ್ ಸ್ಪೇಷಾಲಿಟಿ ಹಲ್ಲಿನ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ ಎಂದರು.
ಹಲ್ಲು ಚಿಕಿತ್ಸೆ ಪಡೆದುಹೋದ ನಂತರ ಅಂವತಹವರ ಸಂಪರ್ಕ ವಿಳಾಸ ಇಟ್ಟುಕೊಂಡು ಮುಂದಿನ ಚಿಕಿತ್ಸೆ ದಿನವನ್ನೂ ನೆನಪಿಸುವ ಕೆಲಸ ಈ ಆಸ್ಪತ್ರೆಯಲ್ಲಿ ಸಾಗಿದೆ. ಇದಲ್ಲದೆ ಹ್ಯಾಪಿ ಕ್ಲಿನಿಕ್ ಹವರ್ಸ್ ಎಂದು ಉಚಿತ ದಂತ ಚಿಕಿತ್ಸೆಗೂ ಇಲ್ಲಿನ ಅವಕಾಶ ಕಲ್ಪಿಸಲಾಗಿದೆ. ಗುಲ್ಬರ್ಗ ಭಾಗದ ಜನರ ಆರ್ಥಿಕ ಗುಣಮಟ್ಟ ಆಧರಿಸಿಯೇ ಇಲ್ಲಿನ ಸೇವೆಗಳಿಗೆ ದರ ನಿಗದಿಮಾಡಲಾಗಿದೆ. ಜನರಿಗೆ ಅಗ್ಗದ ದರದಲ್ಲಿ ಅತ್ಯಾಧುನಿಕ, ಗುಣಮಟ್ಟದ ದಂತ ಚಿಕಿತ್ಸೆ ನೀಡಬೇಕು ಎಂಬುದೇ ತಮ್ಮ ಗುರಿ ಎಂದು ಡಾ. ಪ್ರಶಾಂತ ಹೇಳಿದ್ದಾರೆ.