ಲೋಹ, ಪವಿತ್ರ ಮಣ್ಣು ಸಂಗ್ರಹ ಕಾರ್ಯಕ್ರಮ
ಶಹಾಪುರ: ಸಗರ ಗ್ರಾಮದಲ್ಲಿ ಮಲ್ಕಣ್ಣಗೌಡ ಸುಬೇದಾರ ಸ್ಮರಣಾರ್ಥವಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮಹೇಶಗೌಡ ಸುಬೇದಾರ ನೇತೃತ್ವದಲ್ಲಿ ನಡೆದ ಲೋಹ ಪುರುಷ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಿಸಲು ಗ್ರಾಮೀಣ ಮಟ್ಟದಿಂದ ಲೋಹ ಮತ್ತು ಪವಿತ್ರ ಮಣ್ಣು ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ರಾಮಣ್ಣಗೌಡ ಚಿತ್ತರಗಿ ಮಾತನಾಡಿದರು. ಮೈಲಾರಪ್ಪ ಊರಕಾಯಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಸೂಗೂರು, ಗ್ರಾಪಂ ಸದಸ್ಯರಾದ ಮಹಾಂತಗೌಡ ಸುಬೇದಾರ, ಯಲ್ಲಯ್ಯ ನಾಯಕ, ಬಸವರಾಜ ಅರುಣಿ, ಗುರುಲಿಂಗಪ್ಪಗೌಡ, ಎಸ್.ಎಸ್ ಅರಿಕೇರಿ, ಎಸ್.ಎಸ್. ಬಿರಾದಾರ, ಲಿಂಗಣ್ಣ ನಾಗಲೊಟ, ರಾಜು ಗುಂಡಾನೊರ, ಶರಣಗೌಡ ಎಸ್. ಸುಬೇದಾರ, ಶರಬಣ್ಣ ರಸ್ತಾಪುರ, ಮಂಜು ಬಿರಾದಾರ ಮತ್ತು ಗ್ರಾಮದ ಹಿರಿಯರು, ಯುವಕರು ಹಾಗೂ ರೈತ ಬಾಂಧವರು ಭಾಗವಹಿಸಿದ್ದರು.