ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೋನಿಯಾ ಜತೆ ಚರ್ಚಿಸಲು ನಿಗದಿಗೆ ಮನವಿ

Lingaraj Badiger
Updated On : 30 Jan 2014, 10:54 am

ಗುಲ್ಬರ್ಗ: ಫೆ.1ರಂದು ಗುಲ್ಬರ್ಗಕ್ಕೆ ಆಗಮಿಸಲಿರುವ ಸೋನಿಯಾಗಾಂಧಿಯವರ ಜೊತೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಸಮಯಾವಕಾಶ ನಿಗದಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘವು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಕಲ್ಬುರ್ಗಿ ವಿಭಾಗದ ಪ್ರಮುಖ ಬೆಳೆಗಳಾದ ಬಿಳಿಜೋಳ, ತೊಗರಿ, ಕಡಲೆ, ಶೇಂಗಾ ಹಾಗೂ ಭತ್ತದ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ವಿಶೇಷವಾಗಿ ಕಬ್ಬು ಬೆಳೆಗಾರರು ಕೂಡ ಇಲ್ಲಿ ನೀರಾವರಿ ಪಂಪ್‌ಸೆಟ್‌ಗಳ ನೆರವಿನಿಂದ ಬೆಳೆ ತೆಗೆಯುತ್ತಿದ್ದರೂ ಸಾಗುವಳಿ ವೆಚ್ಚ ವಿಪರೀತ ಹೆಚ್ಚಾಗಿ ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗದೆ ಪರದಾಡುತ್ತಿದ್ದಾರೆ.
ಇದರ ಬಗ್ಗೆ ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಆದಕ್ಕಾರಣ ಫೆ.1 ರಂದು ಆಗಮಿಸಲಿರುವ ಸೋನಿಯಾಗಾಂಧಿ ಜೊತೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ಕೊಡಬೇಕೆಂದು ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧ್ಯಕ್ಷ ದೊಡ್ಡಪ್ಪ ಕಾಮ, ಗೌರವಾಧ್ಯಕ್ಷ ಗುರುಲಿಂಗಪ್ಪ ಪಾಟೀಲ್ ನರಸಿಂಗರಾವ್ ಬಿ. ಕುಲ್ಕರ್ಣಿ, ಸಿದ್ದಲಿಂಗರೆಡ್ಡಿ ಕೋಡ್ಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement