ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಸಂಸದ ಸೇಡಂ
ಗುಲ್ಬರ್ಗ: ಪ್ರತಿಭೆಗಳಿಗೆ ಪ್ರೋತ್ಸಾಹದ ಮಾತುಗಳು ಅಗತ್ಯ. ಇದಕ್ಕಾಗಿ ಮನಸ್ಸುಗಳು ಕ್ರಿಯಾಶೀಲವಾಗಬೇಕಿದೆ ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಮನೀಷಾ ಸಮುದಾಯ ಕಾಲೇಜು ಶುಕ್ರವಾರ ಇಲ್ಲಿನ ವಿಕಾಸ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಪಡೆದು ವೃತ್ತಿನಿರತರಾದ ಆರೋಗ್ಯ ಸೇವಾ ಕಾರ್ಯಕರ್ತೆಯರು ಹಾಗೂ ಗೃಹದಾಯಿ ಸಂಘಗಳ ಉದ್ಘಾಟನೆಯಲ್ಲಿ ಮಾತನಾಡಿದರು.
ತಮ್ಮ ನೇತೃತ್ವದಲ್ಲಿರುವ ವಿಕಾಸ ಅಕಾಡೆಮಿಯಲ್ಲಿ ಬರುವ 10 ವರ್ಷಗಳಲ್ಲಿ 2.50 ಲಕ್ಷ ಹೈ- ಕ ಭಾಗದ ಜನರ ತಲಾ ಆದಾಯ ಈಗಿರುವದಕ್ಕಿಂತ ದ್ವಿಗುಣವಾಗುವಂತೆ ಮಾಡುವ ಗುರಿ ಹೊಂದಿರುವುದಾಗಿ ಹೇಳಿದರು.
ಕೇಂದ್ರೀಯ ವಿವಿ ಎಂಎಸ್ಡಬ್ಲು ವಿಭಾಗದ ಮುಖ್ಯಸ್ಥ ಡಾ. ಚೆನ್ನವೀರ, ಸರ್ಕಾರಿ ಬಾಲಕಿಯರ ಪಪೂ ಕಾಲೇಜು ಪ್ರಾಚಾರ್ಯ ಡಾ.ಎನ್.ಎನ್. ಹೊಸೂರ್ ಮಾತನಾಡಿದರು.
ಮನೀಷಾ ಸಮುದಾಯ ಕಾಲೇಜಿನ ಡಾ. ಉಷಾ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ತರಬೇತಿ ಪಡೆದು ಯಶಸ್ವಿ ಬದುಕು ಕಟ್ಟಿಕೊಂಡಿರುವವರ ಪೈಕಿ ಇಂದಿರಾ, ಜಗದೇವಿ, ಸುಧಾ, ರೇಣುಕಾ, ಶೀಲಾ ಮಾತನಾಡುತ್ತ, ತಮ್ಮ ಬದುಕಿಗೆ ದಾರಿ ತೋರಿಸಿದ್ದೇ ಮನೀಷಾ ಸಮುದಾಯ ಕಾಲೇಜಿನ ಕೌಶಲ್ಯ ಶಿಕ್ಷಣ ಎಂದು ಹೇಳುತ್ತ ಅಲ್ಲಿನ ಸಿಬ್ಬಂದಿಗೆ ಅಭಿನಂದಿಸಿದರು.
ಮುಕ್ತಾ ಪಾಟೀಲ್ ಸರ್ವರನ್ನು ಸ್ವಾಗತಿಸಿದರು. ವಿಕಾಸ ಅಕಾಡೆಮಿಯ ಶಾಂತರೆಡ್ಡಿ, ಮಾರ್ಥಾಂಡ ಶಾಸ್ತ್ರೀ, ಮನೀಷಾ ಸಮುದಾಯ ಕಾಲೇಜಿನ ಸಂಪನ್ಮೂಲ ವ್ಯಕ್ತಿಗಲಾದ ಭುವನೇಶ್ವರಿ ಚಿಮ್ಕೋಡ್, ಶಾಂತಾ, ರಾಜಶ್ರೀ, ಕಲ್ಪನಾ, ಮಮತಾ, ವಿನೋದ ಪಾಟೀಲ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಜಶ್ರೀ ಚಿಟಗುಪೀಕರ್ ವಂದಿಸಿದರು.