ವರುಣನ ಆಗಮನಕ್ಕಾಗಿ ಪ್ರಾರ್ಥನೆ
ಯಾದಗಿರಿ: ಇಲ್ಲಿನ ಮೌನೇಶ್ವರ ದೇವಸ್ಥಾನದಲ್ಲಿ ಗುರುವಾರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿಗಳ ಸಮ್ಮುಖದಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಸಿದರು.
ಬೆಳಿಗ್ಗೆ ಏಕದಂಡಗಿ ಮಠದಿಂದ ಭಜನೆ ಮೇಳದೊಂದಿಗೆ ಪಾದಯಾತ್ರೆ ಮೂಲಕ ಕುಂಭ ಮೇಳದೊಂದಿಗೆ ಮೌನೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಎಲ್ಲೆಡೆ ಮಳೆಯಾಗಲಿ, ನೀರಿನ ಸಮಸ್ಯೆ ನೀಗಲಿ ಜೊತೆಗೆ ಸಮೃದ್ಧ ಬೆಳೆ ಬರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಸದ್ಯ ಮಳೆಬಾರದೆ ರೈತರು ಆಕಾಶದತ್ತ ಮುಖಮಾಡಿ ಕುಳಿತಿದ್ದಾರೆ. ಬರದ ಪರಿಸ್ಥಿತಿ ಬಾರದಿರಲಿ ಎಂದು ವಿಶೇಷ ಪೂಜೆ ಪುನಸ್ಕಾರ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ವರುಣ ದೇವನ ಕೃಪೆ ಉಂಟಾಗಿ ಎಲ್ಲೆಡೆ ಸುಭೀಕ್ಷೆ ನೆಲೆಸುವಂತಾಗಲು ಪೂಜೆ ನಡೆಸಲಾಗಿದೆ ಎಂದು ತಿಳಿಸಿದರು.
ಏಕದಂಡಗಿ ಮಠದಿಂದ ಶ್ರೀಗಳಾದ ರವೀಂದ್ರ ಮಹಾಸ್ವಾಮಿ, ತಾಲೂಕು ಅಧ್ಯಕ್ಷ ಮಹೇಶ್ ವಿಶ್ವಕರ್ಮ, ನಗರ ಅಧ್ಯಕ್ಷ ಶಿವಣ್ಣ ಮೂನೂರ್ ಸೇರಿದಂತೆ ಇಕತರರು ಹಾಜರಿದ್ದರು.