ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಲುವೆಗಳಿಗೆ ಎಸ್ಕೆಪ್ ನೀರು ಹರಿಸಿ: ಶಾಸಕ

Mainashree
Updated On : 6 Jul 2014, 10:44 am

ಸುರಪುರ: ತಾಲೂಕಿನಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ತೊಂದರೆ ನಿವಾರಣೆಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ತಕ್ಷಣ ಎಸ್ಕೆಪ್ ನೀರು ಹರಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಆಗ್ರಹಿಸಿದ್ದಾರೆ.
ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಆಗ್ರಹಿಸಿದ ಶಾಶಕರು ಮಾತನಾಡುತ್ತ, ತಾಲೂಕಿನಲ್ಲಿ ಮುಂಗಾರು ವಿಫಲವಾಗಿರುವುದರಿಂದ ಬಹುತೇಕ ಹಳ್ಳಗಳು ನಿರೀಲ್ಲದೆ ಬತ್ತಿ ಹೋಗಿವೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಡ್ಯಾಂನಿಂದ ಕಾಲುವೆಗಳಿಗೆ ಎಸ್ಕೇಪ್ ನೀರು ಹರಿಸಿದರೆ ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ ಎಂದು ತಿಳಿಸಿದ್ದಾರೆ. ಸುರಪುರ ಪಟ್ಟಣಕ್ಕೆ ಶೆಳ್ಳಗಿ ಹತ್ತಿರ ಹರಿಯುವ ಕೃಷ್ಣಾ ನದಿಯಿಂದ ನೀರು ಪೂರೈಕೆಯಾಗುತ್ತದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ಜಾಕ್ವೆಲ್ ಪಂಪ್ಹೌಸ್ಗೆ ನೀರು ಮುಟ್ಟದ ಕಾರಣ ಪಟ್ಟಣದ ನೀರಿನ ವ್ಯವಸ್ಥೆ ನಿಂತು ಹೋಗಿದ್ದು, 60 ಸಾವಿರ ನಿವಾಸಿಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದ್ದರಿಂದ ಜಲಾಶಯದಿಂದ ನದಿಗೆ ನೀರು ಹರಿಸಬೇಕು ಮತ್ತು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇನ್ನಿತರ ವಿಷಯಗಳ ಕುರಿತಾದ ಮಾಹಿತಿಗಾಗಿ ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ಕೆಬಿಜೆಎನ್ಎಲ್ ಎಂಡಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement