ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುರಪುರಕ್ಕೆ ಹೆಚ್ಚಿನ ಬಸ್ ಸಂಚಾರಕ್ಕೆ ಆಗ್ರಹ

Mainashree
Updated On : 6 Jul 2014, 10:44 am

ಯಾದಗಿರಿ: ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಕಾನಾಪೂರ ಗ್ರಾಮದಿಂದ ಹತ್ತಿಗೂಡುರ ಗ್ರಾಮದವರೆಗಿನ ಸಂಚಾಕ ದುಸ್ತರವಾಗಿದೆ. ಈ ಭಾಗದ ಗ್ರಾಮಸ್ಥರು ಪ್ರತಿದಿನ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ.
ಯಾದಗಿರಿ ಘಟಕದಿಂದ ಒಂಭತ್ತು ಗಂಟೆಗೆ ಬಿಡುವ ಯಾದಗಿರಿ-ಸುರುಪುರ ಬಸ್ ನಂತರ ತಡಬಿಡಿ, ಹುಂಡೆಕಲ್, ಗುಂಡಗುರ್ತಿ, ಅನವಾರ ಮತ್ತು ಹತ್ತಿಗೂಡುರ ಗ್ರಾಮಗಳಿಗೆ ಯಾವುದೇ ಬಸ್ ಸಂಪರ್ಕವಿಲ್ಲ. ಟಂಟಂಗಳಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿ ಚಲಾಯಿಸುವುದರಿಂದ ಚಾಲಕರ ನಿಯಂತ್ರಣ ತಪ್ಪಿ ಅನೇಕ ವೇಳೆ ಪ್ರಯಾಣಿಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.
ಸಾಯಂಕಾಲ ಆರು ಗಂಟೆಯ ನಂತರ ಯಾದಗಿರಿಯಿಂದ ಸುರುಪುರ ಕಡೆಗೆ ಹೋಗಬೇಕಾದರೆ ಸುಮಾರು ಎರಡರಿಂದ ಮೂರು ಗಂಟೆ ನಿಲ್ದಾಣದಲ್ಲಿ ಕಾಯಬೇಕಾದ ದುಸ್ಥಿತಿಯಿದೆ. ಸುರುಪುರ ಮಾರ್ಗದ ಕಡೆಗೆ ಇರುವ ಗ್ರಾಮಸ್ಥರದ್ದಾಗಿದೆ. ಸಮಸ್ಯೆ ಕುರಿತಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹಯ್ಯಾಳ(ಬಿ) ಕರವೇ ಹೋಬಳಿ ಘಟಕದ ಅಧ್ಯಕ್ಷ ರವಿಕುಮಾರ ದೇವರಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಘಟಕದಿಂದ ಸುರುಪೂರ ಮಾರ್ಗವಾಗಿ ಇನ್ನೂ ಹೆಚ್ಚಿನ ಬಸ್ ಸಂಪರ್ಕ ಕಲ್ಪಿಸುವುದರ ಜೊತೆಗೆ ಸಾಯಂಕಾಲ ಏಳು ಗಂಟೆಗೆ ಸುರುಪುರ ಮಾರ್ಗವಾಗಿ ಬಸ್ ಸಂಚರಿಸುವಂತೆ ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement