ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹುಣಸಗಿ ತಾಲೂಕಾದರೆ ಕೆಂಭಾವಿ ಯಾಕಾಗಬಾರ್ದು?: ಸಿಎಂಗೆ ಮನವಿ

Mainashree
Updated On : 13 Jul 2014, 10:59 am

ಯಾದಗಿರಿ: ಪ್ರಸ್ತುತ ಸುರಪುರ ತಾಲೂಕು ವ್ಯಾಪ್ತಿಗೆ ಸೇರಿರುವ ಕೆಂಭಾವಿಯನ್ನು ಪ್ರತ್ಯೇಕ ತಾಲೂಕು ಮಾಡುವಂತೆ ಆಗ್ರಹಿಸಿ ಕೆಂಭಾವಿ ತಾಲೂಕು ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
62 ಗ್ರಾಮಗಳನ್ನು ಸೇರಿಸಿ ಕೆಂಭಾವಿಯನ್ನು ತಾಲೂಕಾಗಿ ರಚನೆ ಮಾಡಬೇಕಿದೆ. ಇದರಿಂದಾಗಿ ಸಾಕಷ್ಟು ಅನುಕೂಲವಾಗುತ್ತದೆ. ಒಂದು ವೇಳೆ ನಿಷ್ಕಾಳಜಿ ವಹಿಸಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಸುರಪುರ ತಾಲೂಕಿನ ಹುಣಸಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ ದೊಡ್ಡ ಪಟ್ಟಣದಂತಿರುವ ಕೆಂಭಾವಿಯನ್ನು ಮಾತ್ರ ಹೊರಗಿಟ್ಟಿರುವುದು ಸರಿಯಲ್ಲ ಎಂದು ದೂರಿದ್ದಾರೆ.
ಕೆಂಭಾವಿ ನೀರಾವರಿ ಪ್ರದೇಶ. ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರ. ಆದಾಯ ಹೆಚ್ಚಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುವುದು ಅತ್ಯವಶ್ಯ ಎಂದು ತಿಳಿಸಿದ್ದಾರೆ.
ತಾಲೂಕು ರಚನೆ ಮಾಡಿದರೆ ರಾಜ್ಯ ಸರ್ಕಾರದ ಮೇಲೆ ಯಾವುದೇ ರೀತಿಯಿಂದ ಹೊರೆ ಬೀಳುವುದಿಲ್ಲ. ಅದಕ್ಕಾಗಿ ಕೂಡಲೇ ಸರ್ಕಾರ  ಅಗತ್ಯ ಕ್ರಮಕೈಗೊಂಡು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಬಿಜೆಎನ್‌ಎಲ್ ಮತ್ತು ಕೃಷ್ಣಾ ಕಾಡಾದ ಅನೇಕ ಕಚೇರಿಗಳು ಇಲ್ಲಿವೆ. ಇದಲ್ಲದೇ ಕೆಲವೊಂದು ಸರ್ಕಾರಿ ಇಲಾಖೆಯ ಕಚೇರಿಗಳು ಇವೆ. ವಸತಿ ನಿಲಯಗಳು ಇವೆ. ಹೀಗಾಗಿ ತಾಲೂಕು ಕೇಂದ್ರವಾಗಲು ಅರ್ಹ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement