ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೋಲ್ಡ್ ಸ್ಟೋರೇಜ್ ನೆಲಸಮಕ್ಕೆ ಜಿಡಿಎ ಆದೇಶ

Mainashree
Updated On : 14 Jul 2014, 10:00 am

ಗುಲ್ಬರ್ಗ: ನಗರದ ಹೀರಾಪುರ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಹಾಗೂ ಕಾನೂನು ಕಟ್ಟಳೆ ಉಲ್ಲಂಘಿಸಿ ತಲೆ ಎತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಶೀತಲೀಕರಣ ಘಟಕ 15 ದಿನದೊಳಗೆ ನೆಲಸಮ ಮಾಡುವಂತೆ ಘಟಕದ ಮಾಲೀಕರಿಗೆ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ಜು.11ರಂದು ನೋಟಿಸ್ ಜಾರಿ ಮಾಡಿದೆ.
ಈ ಶೀತಲೀಕರಣ ಘಟಕ ಮೊಹ್ಮದ್ ಇಲಿಯಾಸ್ ಎಂಬುವವರಿಗೆ ಸೇರಿದ್ದಾಗಿದ್ದು, ವಸತಿ ಉಪಯೋಗದ ಕೃಷಿಯೇತರ ಜಮೀನಿನಲ್ಲಿ ವಾಣಿಜ್ಯ ಉಪಯೋಗದ ಶೀತಲೀಕರಣ ಘಟಕ ತಲೆ ಎತ್ತಿತ್ತು. ಇದನ್ನು ಪ್ರಶ್ನಿಸಿ ಹೋರಾಟಗಾರ, ಮಾಜಿ ಮಂತ್ರಿ ಎಸ್.ಕೆ. ಕಾಂತಾ ಕಳೆದಾರು ತಿಂಗಳಿಂದ ಕಾನೂನಾತ್ಮಕ ಹೋರಾಟ ಆರಂಭಿಸಿದ್ದರು. ಕಳೆದೆರಡು ತಿಂಗಳ ಹಿಂದೆ ಜಿಲ್ಲಾಡಳಿತ ಸದರಿ ಘಟಕದ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿರುವ ತಂಡ ರಚಿಸಿ ಸಮೀಕ್ಷೆ ನಡೆಸಿ ವರದಿ ಪಡೆದಿತ್ತು.
ಇದೀಗ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ಸದರಿ ಘಟಕ ಕಾನೂನು ಉಲ್ಲಂಘಿಸಿದೆ, ವಸತಿ ಉಪಯೋಗದ ಕೃಷಿಯೇತರ ಜಮೀನಿನಲ್ಲಿ ವಾಣಿಜ್ಯ ಉಪಯೋಗದ ಶೀತಲೀಕರಣ ಘಟಕ ನಿರ್ಮಿಸಲಾಗಿದೆ. ಇದು ಅನಧಿಕೃತ, ಇದನ್ನು ತಕ್ಷಣ ನೆಲಸಮ ಮಾಡಬೇಕು ಎಂದು ಮಾಲೀಕ ಇಲಿಯಾಸ್‌ಗೆ ನೋಟಿಸ್ ನೀಡಿದೆ ಎಂದು ಕಾಂತಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಜಿಡಿಎ ಕ್ರಮವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಹೋರಾಟಗಾರ ಕಾಂತಾ, ಈ ಕೋಲ್ಡ್ ಸ್ಟೋರೇಜ್ ಹೆಸರಲ್ಲಿ ನಕಲಿ ದಾಖಲೆಗಲು ಸೃಷ್ಟಿಸಲಾಗಿದೆ. ಜೆಸ್ಕಾಂನಲ್ಲಿಯೂ ಈ ದಾಖಲೆಗಳನ್ನೇ ಬಳಸಲಾಗಿದೆ. ಇನ್ನು ತೋಟಗಾರಿಕೆ ಇಲಾಖೆಯಲ್ಲಿಯೂ ಇಂತಹದ್ದೇ ದಾಖಲೆಗಳನ್ನು ಬಳಸಿ 2 ಕೋಟಿ ಮೊತ್ತದಷ್ಟು ಸಬ್ಸಿಡಿ ಸಹ ಪಡೆಯಲಾಗಿದೆ ಎಂದು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement