ಅತ್ಯಾಚಾರ ಖಂಡಿಸಿ ಎಸ್ಸೆಫೈ ಪ್ರತಿಭಟನೆ
ಸುರಪುರ: ಉಡುಪಿ ಜಿಲ್ಲೆಯ ಶಿರೂರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತಾ. ಭಾರತ ವಿದ್ಯಾರ್ಥಿ ಫೆಡರೇಷನ್ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಪತ್ರಿಭಟನೆ ನಡೆಸಿತು. ಎಸ್ಎಫ್ಐ ತಾ. ಘಟಕದ ಅಧ್ಯಕ್ಷ ಸೀತಾರಾಮ ರಾಠೋಡ, ಸಿಐಟಿಯು ಮುಖಂಡ ದೇವಿಂದ್ರಪ್ಪ ಪತ್ತಾರ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮಾತನಾಡಿ, ಮಹಿಳೆಯರ ಮೇಲೆ ದೈಹಿಕ ಹಲ್ಲೆ, ಬಲತ್ಕಾರ, ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಕೊಲೆಯಿಂದ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು. ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಗುರು ಚವ್ಹಾಣ, ವೀರೇಶ, ಬಸವರಾಜ, ರಮೇಶ ಶೆಳ್ಳಗಿ, ರಾಠೋಡ, ಸುರೇಶ ಇತರರು ಇದ್ದರು.