ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುನಿಪುಂಗವರ ಆರಾಧನೆ ಸಡಗರ

Rashmi Kasaragodu
Updated On : 17 Jul 2014, 11:03 am

ಗುಲ್ಬರ್ಗ: ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ತೀರದಲ್ಲಿರುವ ಮಳಖೇಡದಲ್ಲಿ ನೆಲೆ ನಿಂತಿರುವ ಮುನಿಪುಂಗವ ಶ್ರೀ ಜಯತೀರ್ಥರ ಆರಾಧನೆ ಆಷಾಢ ಬಹುಳ ಪಂಚಮಿ ಬುಧವಾರ ವೈಭವದಿಂದ ನಡೆಯಿತು. ಸಹಸ್ರಾರು ಭಕ್ತರು ಮಳಖೇಡದಲ್ಲಿ ಸೇರಿದ್ದರು.
ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಜಯರಾಯರ ಆರಾಧನೆ ಸಡಗರ, ಸಂಭ್ರಮ ನಡೆದಿದ್ದರಿಂದ ಸೇರಿದ್ದ ಭಕ್ತರಲ್ಲಿ ಉತ್ಸಾಹ ತುಂಬಿ ತುಳುಕಿತ್ತು. ಬೆಳಗಿನಿಂದಲೇ ಸುಧಾ ಪಾಠ, ಉಪನ್ಯಾಸಗಳು ನಡೆದವು. ಮೂಲ ವೃಂದಾವನಕ್ಕೆ ಕ್ಷೀರಾಭಿಷೇಕ, ವಿಶೇಷ ಪೂಜೆ, ಅಲಂಕಾರಗಳು ನಡೆದವು. ಶ್ರೀಗಳು ಮೂಲರಾಮ ದೇವರ ಪೂಜೆನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement