ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯಾರ್ಥಿಗಳ ಸಮಸ್ಯೆಗೆ ಸಂಘಟನೆ ಪರಿಹಾರ

Rashmi Kasaragodu
Updated On : 17 Jul 2014, 11:05 am

ಶಹಾಬಾದ್: ಸರ್ಕಾರ ಜಾರಿಗೊಳಿಸುವ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಶೈಕ್ಷಣಿಕವಾಗಿ ಎದುರಾಗುವ ವಿವಿಧ ಸಮಸ್ಯೆಗಳ ನಿವಾರಣೆಗೆ ಸಂಘಟನೆ ಮೂಲಕ ಸಂಘಟಿತ ಹೋರಾಟ ಕಟ್ಟುವುದೊಂದೇ ಏಕೈಕ ಪರಿಹಾರ ಎಂದು ಎಐಡಿಎಸ್ಒ ಸ್ಥಳೀಯ ಸಮಿತಿ ಸಹ ಕಾರ್ಯದರ್ಶಿ ಶರಣು ಹೇರೂರ ಹೇಳಿದರು.
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ನಿಮಿತ್ತ ಪಟ್ಟಣದ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಸದಸ್ಯತ್ವ ನೀಡಿ ಅವರು ಮಾತನಾಡಿದರು. ಸರ್ಕಾರಗಳು ವಿದ್ಯಾರ್ಥಿಗಳನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸುವ ಬದಲು ಕೇವಲ ಅಂಗಗಳಿಗೆ ಮಾತ್ರ ಸೀಮಿತವಾಗಿಸಿ, ಅವೈಜ್ಞಾನಿಕ ಆಚರಣೆಗಳೆಡೆಗೆ ವಿದ್ಯಾಥಿಗಳನ್ನು ಕೊಂಡೊಯುತ್ತಿವೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬದಲು, ಮುಚ್ಚುವ ಹುನ್ನಾವರದಲ್ಲಿದ್ದು, ಇದರಿಂದ ಖಾಸಗಿ ಸಂಸ್ಥೆಗಳು ಬಡ ಮಕ್ಕಳ ಭವಿಷ್ಯವನ್ನು ಕಮರಿಸುವ ಕೆಲಸ ಮಾಡುತ್ತಿದ್ದು, ಉನ್ನತ ಶಿಕ್ಷಣ ಕೇವಲ ಶ್ರೀಮಂತರ ಪಾಲಾಗುತ್ತಿದೆ. ಇವುಗಳನ್ನು ಮೆಟ್ಟಿ ನಿಲ್ಲಲು ವಿದ್ಯಾರ್ಥಿಗಳು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಎಐಡಿಎಸ್ಒ ಮುಖಂಡರಾದ ಶಿವುಕುಮಾರ ಅಂದೋಲಾ, ಮಲ್ಲಿನಾಥ ಹುಂಡೇಕಲ್, ಸಾಯಿನಾಥ ಚಿಟೇಲಕರ್, ಶ್ರೀಕಾಂತ ಜಾಧವ, ಆಕಾಶ ನಿಂಬರ್ಗಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement